ಕಲಬುರಗಿ | ಪೊಲೀಸರಿಗೆ ವಸತಿ ಗೃಹಗಳ ವ್ಯವಸ್ಥೆಗೆ ಒತ್ತಾಯಿಸಿ ಮನವಿ

ಕಲಬುರಗಿ: ಸೇಡಂ ತಾಲೂಕಿನ ಸೇಡಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸೇಡಂ, ಮಳಖೇಡ ಕುರುಕುಂಟಾ ಠಾಣೆಗಳ ಪೊಲೀಸರಿಗೆ ನೂತನ ವಸತಿ ಗೃಹಗಳ ಸೌಕರ್ಯ ಒದಗಿಸಬೇಕು ಹಾಗೂ ಪಟ್ಟಣದ ಬಸವೇಶ್ವರ ವೃತ್ತದಿಂದ ವಾಸದತ್ತ ಕಾರ್ಖಾನೆವರೆಗೆ ಚತೃಕೋನ ರಸ್ತೆ ಇದ್ದರೂ ಎಡಭಾಗ ಬಲಭಾಗಕ್ಕೆ ಲಾರಿಗಳು ನಿಲ್ಲುವುದರಿಂದ ಅಪಘಾತಗಳು ಹೆಚ್ಚುತ್ತಿರುವುದು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಸೇಡಂ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವ್ಯಾಪ್ತಿಯಲ್ಲಿ ಅತಿ ದೊಡ್ಡ ಠಾಣೆಯಾಗಿರುವ ಸೇಡಂ, ಮಳಖೇಡ, ಕುರುಕುಂಟಾ ಠಾಣೆಗಳು ಬರುತ್ತವೆ. ಮೂರು ಠಾಣೆಯ ಪೊಲೀಸರಿಗೆ ಸೂಕ್ತವಾದ ವಸತಿ ಗೃಹಗಳು ಇಲ್ಲದೆ ಎಷ್ಟೋ ದಿನಗಳಿಂದ ನಿರ್ಗತಿಕರಂತೆ ಬೇರೆ ಬೇರೆ ಖಾಸಗಿ ವಸತಿ ಗೃಹ ಗಳಲ್ಲಿ ವಸತಿ ಮಾಡುತ್ತಿದ್ದಾರೆ. ಸೇಡಂ ತಾಲೂಕಿನಲ್ಲಿ ಅನೇಕ ಕಾರ್ಖಾನೆಗಳಿದ್ದು, ಜನ ಸಂದಣೆ ಬಹಳಷ್ಟು ಇರುವುದರಿಂದ ಪೊಲೀಸರು ಅತಿ ಅವಶ್ಯಕ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸುವ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.
ಸೇಡಂ ಪಟ್ಟಣದ ಸುತ್ತಮುತ್ತ ಅನೇಕ ಕಾರ್ಖಾನೆಗಳಿದ್ದು. ಕಾರ್ಖಾನೆಗಳಿಗೆ ಲಾರಿಗಳು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರದಿಂದ ಹೆಚ್ಚು ಹೆಚ್ಚಾಗಿ ಬರುತ್ತಿವೆ. ರಸ್ತೆಯ ಎಡಭಾಗಕ್ಕೆ ಬಲಭಾಗಕ್ಕೆ ನಿಂದಿಸುವುದರಿಂದ ತಿಂಗಳಲ್ಲಿ ಎರಡು ಮೂರು ಅಪಘಾತಗಳು ಸಂಭವಿಸಿ ಸಾವುಗಳು ಹೆಚ್ಚಾಗಿ ಕಾಣುತ್ತಿವೆ. ಲಾರಿಗಳ ನಿಲುಗಡೆಗೆ ಬೇರೆ ಕಡೆ ವ್ಯವಸ್ಥೆ ಮಾಡಬೇಕು. ರಂಜೋಳ ಕ್ರಾಸ್ ಹತ್ತಿರ ತುಂಬಾ ಅಪಘಾತಗಳು ಸಂಭಿಸುವ ಪ್ರದೇಶವಾಗಿದ್ದು, ಮೇಘ ನಿಯಂತ್ರಕಗಳು ಅಳವಡಿಸಿದರೆ ಅಪಘಾತಗಳು ತಪ್ಪುತ್ತವೆ ಎಂದು ಮನವಿ ಪತ್ರಸಲ್ಲಿಸಿ ಬೇಡಿಕೆಗಳ ಈಡೇರಿಸಬೇಕೆಂದು ಅಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸೇಡಂ ಕರವೇ ಅಧ್ಯಕ್ಷ ರಾಮಚಂದ್ರ ಗುತ್ತೇದಾರ, ಗೋಪಾಲ ನಾಟೀಕಾರ, ವಿಶ್ವನಾಥ ಪಾಟೀಲ, ರಾಜಕುಮಾರ ಬಿ, ಚಂದ್ರಶೇಖರ ಮಾಡಿವಾಳ, ನಿಜಲಿಂಗ ಸ್ವಾಮಿ, ಸತೀಶ ಬಿರನೂರ ಇದ್ದರು.







