Kalaburagi | ಜ್ಯೋತಿರ್ ವಿಜ್ಞಾನ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

ಕಲಬುರಗಿ: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಒಯು) ವತಿಯಿಂದ ಶೈಕ್ಷಣಿಕ ವರ್ಷ 2026–27ರ ಜುಲೈ ಆವೃತ್ತಿಗೆ ‘ಜ್ಯೋತಿರ್ ವಿಜ್ಞಾನ ಪ್ರೋಗ್ರಾಂ’ (ಮುಕ್ತ ಮತ್ತು ದೂರ ಶಿಕ್ಷಣ) ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರು ತಿಳಿಸಿದ್ದಾರೆ.
ಈ ಕಾರ್ಯಕ್ರಮದಡಿ 6 ತಿಂಗಳ ಜ್ಯೋತಿರ್ ವಿಜ್ಞಾನ ಪ್ರಮಾಣಪತ್ರ ಕೋರ್ಸ್, ಒಂದು ವರ್ಷದ ಪ್ರೆಡಿಕ್ಟಿವ್ ಆಸ್ಟ್ರಾಲಜಿ, ಮುಂದಾನೆ ಆಸ್ಟ್ರಾಲಜಿ ಹಾಗೂ ವಿಷ್ಣು ಸಹಸ್ರ ಡಿಪ್ಲೋಮಾ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಭಾರತೀಯ ಜ್ಞಾನ ವ್ಯವಸ್ಥೆಯಡಿ ಜ್ಯೋತಿರ್ ವಿಜ್ಞಾನ ಮತ್ತು ವಿಷ್ಣು ಸಹಸ್ರ ವಿಷಯಗಳಿಗೆ ಸಂಬಂಧಿಸಿದ ವಿಶೇಷ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ.
ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಅಕ್ಟೋಬರ್ 13, 2026 ಆಗಿದೆ.
ಹೆಚ್ಚಿನ ಮಾಹಿತಿಗಾಗಿ https://www.ksoumysuru.ac.in ವೆಬ್‍ಸೈಟ್‍ಗೆ ಭೇಟಿ ನೀಡುವಂತೆ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




