Kalaburagi | ಎಸೆಸೆಲ್ಸಿ, ಪಿಯುಸಿಯ ಪ್ರತಿಭಾವಂತ ಕುರುಬ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕಲಬುರಗಿ: ಕರ್ನಾಟಕ ಪ್ರದೇಶ ಕುರುಬರ ಸಂಘ ಜಿಲ್ಲಾ ಶಾಖೆ ಹಾಗೂ ಜಿಲ್ಲಾ ಕುರುಬ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ 2025–26ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸಂಘದ ಅಧ್ಯಕ್ಷ ಗುರುನಾಥ್ ಎಸ್. ಪೂಜಾರಿ ಅವರು ಪ್ರಕಟಣೆ ನೀಡಿದ್ದು, ಕುರುಬ, ಕಾಡುಕುರುಬ ಹಾಗೂ ಜೇನುಕುರುಬ ಸಮುದಾಯದ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲು ಹಾಗೂ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿಗಳನ್ನು ಸನ್ಮಾನಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಅರ್ಹ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಗಳನ್ನು ಜುಲೈ 5ರ, 2026ರೊಳಗಾಗಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ತಾಲೂಕುವಾರು ನೌಕರರ ಸಂಘದ ಅಧ್ಯಕ್ಷರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ವಿವಿಧ ತಾಲೂಕುಗಳ ಪ್ರತಿನಿಧಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ. ಇದರಲ್ಲಿ ಜಿಲ್ಲಾಧ್ಯಕ್ಷ ಯಲಗೊಂಡ ಹೀರೆಕುರುಬ (ಮೊ. 9535860641), ಪ್ರಧಾನ ಕಾರ್ಯದರ್ಶಿ ಅರ್ಜುನ ಹತ್ತಿ (ಮೊ. 9686643922), ಯಲ್ಲಾಲಿಂಗ ಬಬಲಾದಕರ್ (ಮೊ. 9731422567), ಜಟ್ಟೇಪ್ಪ ಪೂಜಾರಿ (ಅಫಜಲಪುರ), ಶಾಂತಪ್ಪ ಕೇರಳ್ಳಿ (ಚಿಂಚೋಳಿ), ಯಲ್ಲಾಲಿಂಗ ಮಾಡ್ಯಾಳ (ಆಳಂದ), ಮಾಳಿಂಗರಾಯ ಸುಗೂರ (ಜೇವರ್ಗಿ), ಸಿದ್ದಪ್ಪ ಪೂಜಾರಿ (ಯಡ್ರಾಮಿ), ನಿಂಗಪ್ಪ ಕಲ್ಕೂಡ ಪೂಜಾರಿ (ಕಮಲಾಪುರ), ಮಲ್ಲಿಕಾರ್ಜುನ ಕುಪನೂರ (ಕಾಳಗಿ), ಸಿದ್ದಣ್ಣ ಭಾವಿಕಟ್ಟಿ (ಕಲಬುರಗಿ), ಬಂಡೇಪ್ಪ ಪೂಜಾರಿ (ಸೇಡಂ), ಮಾರುತಿ ಪೂಜಾರಿ (ಶಹಾಬಾದ್), ಮಹೇಶ ಟೆಂಗಳಿ (ಚಿತ್ತಾಪೂರ) ಸೇರಿದಂತೆ ಹಲವರು ಸಂಪರ್ಕಕ್ಕೆ ಲಭ್ಯರಾಗಿದ್ದಾರೆ.
ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ವಿದ್ಯಾರ್ಥಿಗಳು ಹಾಗೂ ನಿವೃತ್ತ ಅಧಿಕಾರಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗುರುನಾಥ್ ಎಸ್. ಪೂಜಾರಿ ಮನವಿ ಮಾಡಿದ್ದಾರೆ.






