ಕಲಬುರಗಿ | ರಂಗ ಪ್ರಶಸ್ತಿಗೆ ರಂಗಸಾಧಕರಿಂದ ಅರ್ಜಿ ಆಹ್ವಾನ

ಕಲಬುರಗಿ : ಕಲಬುರಗಿಯ ರಂಗಸಂಗಮ ಕಲಾವೇದಿಕೆಯಿಂದ ಪ್ರತಿವರ್ಷ ಕೊಡಮಾಡುವ ಪ್ರತಿಷ್ಟಿತ ಎಸ್.ಬಿ.ಜಂಗಮಶೆಟ್ಟಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ಕನ್ನಡ ರಂಗಭೂಮಿಯ ಅರ್ಹ ರಂಗ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ರಂಗ ಸಂಗಮ ಕಲಾ ವೇದಿಕೆಯ ಅಧ್ಯಕ್ಷರು ತಿಳಿಸಿದ್ದಾರೆ.
ಕನ್ನಡ ರಂಗಭೂಮಿಯಲ್ಲಿ ಗಣನೀಯ ಸಾಧನೆಗೈದ ರಂಗ ಕರ್ಮಿಗಳ ಹೆಸರುಗಳನ್ನು, ರಂಗಾಸಕ್ತರು ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದು ಅಥವಾ ಸ್ವತಃ ರಂಗಕಲಾವಿದರೆ ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದವರ ಅರ್ಜಿಗಳನ್ನು ಈ ಪ್ರಶಸ್ತಿಗಾಗಿ ಪರಿಗಣಿಸಲಾಗುವುದಿಲ್ಲ. ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸುವುದು ರಂಗಸಂಗಮ ಕಲಾ ವೇದಿಕೆಯ ಮುಖ್ಯ ಕಾಳಜಿ. ಜಂಗಮಶೆಟ್ಟಿ ಜೋಡಿ ಪ್ರಶಸ್ತಿಯು ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಕಲಾವಿದೆಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈ ಪ್ರಶಸ್ತಿಯು ತಲಾ 10,000 ರೂ.ನಗದು, ಪ್ರಶಸ್ತಿ ಪತ್ರ ಹಾಗೂ ರಂಗ ಸನ್ಮಾನ ಒಳಗೊಂಡಿದ್ದು, ಜುಲೈ 18ರ, 2025ರಂದು ಕಲಬುರಗಿ ನಗರದಲ್ಲಿ ಹಮ್ಮಿಕೊಳ್ಳಲಾಗುವ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
2014ರಿಂದ ಆರಂಭವಾದ ಜಂಗಮಶೆಟ್ಟಿ ರಂಗ ಪ್ರಶಸ್ತಿಯನ್ನು ಇಲ್ಲಿಯವರೆಗೆ ಕನ್ನಡ ರಂಗಭೂಮಿಯ ಹಿರಿಯ ಸಾಧಕರಾದ ಬಸವರಾಜ ಭೀಮನಹಳ್ಳಿ, ಈಶ್ವರಪ್ಪ ಫರಹತಾಬಾದ, ಮನುಬಾಯಿ ನಾಕೋಡ್, ಮಂಡ್ಯ ರಮೇಶ, ಜುಲೇಖಾಬೇಗಂ, ಡಾ. ಶ್ರೀಪಾದ್ ಭಟ್, ಧಾರೇಶ್ವರ್, ದೀಪಕ್ ಮೈಸೂರು, ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಸೇಡಂ, ಶೈಲಜಾ ದುಧನಿಕರ್ ಮೈಂದರ್ಗಿ, ಪ್ರಶಾಂತ್ ಹಿರೇಮಠ, ಪ್ರೇಮಾ ಹೊಸಮನಿ, ಪುರುಷೋತ್ತಮ್ ಹಂದ್ಯಾಳ್, ರಾಧಿಕಾ ಬೇವಿನಕಟ್ಟೆ ಅವರಿಗೆ ನೀಡಿ ಗೌರವಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿಳಾಸ : ಶಿವಗೀತಾ, ಅಧ್ಯಕ್ಷರು ರಂಗ ಸಂಗಮ ಕಲಾ ವೇದಿಕೆ, ಕೆ/ಆಫ್ ಎಚ್. ಎಸ್. ಬಸವಪ್ರಭು, # 1-892-72/10 'ಲಕ್ಷ್ಮಿ ', ಗಣೇಶ್ ನರ್ಸಿಂಗ್ ಹೋಮ್ ಹಿಂದುಗಡೆ, ಗಣೇಶ್ ನಗರ, ಹಳೆ ಜೇವರ್ಗಿ ರಸ್ತೆ, ಕಲಬುರ್ಗಿ -585102, ಮೊಬೈಲ್ ನಂಬರ್ -8660259857. ಸಂಪರ್ಕಿಸಬಹುದಾಗಿದೆ.







