ಕಲಬುರಗಿ | ಕರವೇ ತಾಲೂಕು ಪದಾಧಿಕಾರಿಗಳ ನೇಮಕ

ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆಯ ಅಫಜಲಪುರ ತಾಲೂಕು ಘಟಕದ ಸಭೆಯಲ್ಲಿ ವಿವಿಧ ವಲಯಗಳ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಬಣದ ತಾಲೂಕಾಧ್ಯಕ್ಷ ಶ್ರೀಕಾಂತ್ ದಿವಾಣಜಿ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಕರಜಗಿ ವಲಯಾಧ್ಯಕ್ಷರಾಗಿ ಸೋಮು ನಾಯಿಕೋಡಿ, ಬಡದಾಳ ವಲಯಾದ್ಯಕ್ಷರಾಗಿ ಹಸನ ಮುಲ್ಲಾ, ಅತನೂರ ವಲಯಾಧ್ಯಕ್ಷರಾಗಿ ಇಮಾಮಸಾಬ ಶೇಖ್, ಮಹಿಳಾ ಪ್ರತಿನಿಧಿಗಳಾಗಿ ಮಮತಾ ಪಾಟೀಲ್, ಪ್ರೀಯಾಂಕ ಕೋರಿ, ಮತ್ತು ಅನಿತಾ ಚಿಂಚೋಳಿ ಅವರನ್ನು ನೇಮಕ ಮಾಡಲಾಗಿದೆ.
ಅವರಾದ ಗ್ರಾಮ ಘಟಕ ಅಧ್ಯಕ್ಷರಾಗಿ ಯಲ್ಲಪ್ಪ ಪೂಜಾರಿ, ಉಪಾಧ್ಯಕ್ಷರಾಗಿ ಸಿದ್ದಪ್ಪ ಪೂಜಾರಿ ಅವರನ್ನು ನೇಮಕ ಮಾಡಲಾಯಿತು ಎಂದು ಕರವೇ ತಾಲೂಕು ಅಧ್ಯಕ್ಷ ಶ್ರೀಕಾಂತ್ ದಿವಾಣಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





