ಕಲಬುರಗಿ | ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿಗಳನ್ನು ಪಡೆದ ಕಲಾವಿದರಿಗೆ ಸನ್ಮಾನ

ಕಲಬುರಗಿ: ನಗರದ ಮುಜೀಬ್ ಅಲಿ ಖಾನ್ ಮ್ಯೂಸಿಯಂನಲ್ಲಿ ಈ ವರ್ಷ ವಿಭಿನ್ನ ಕ್ಷೇತ್ರಗಳಲ್ಲಿ ವಿವಿಧ ಪ್ರಶಸ್ತಿಗಳನ್ನು ಪಡೆದ ಸಾಧಕರಿಗೆ ಇಬ್ರಾಹಿಂ ಮೆಮೊರಿಯಲ್ ಉರ್ದು ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರದಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ವಿಜೇತ ರೆಹಮಾನ್ ಪಟೇಲ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗಜನ್ಫರ್ ಇಕ್ಬಾಲ್, ರಾಷ್ಟ್ರೀಯ ಲಲಿತ ಕಲೆ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಆಯಾಝುದ್ದೀನ್ ಪಟೇಲ್ ಮತ್ತು ಉರ್ದು ಸಾಹಿತ್ಯಕಾರ ಮುಬೀನ್ ಅಹ್ಮದ್ ಜಖಂ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ಶಮ್ಸುದ್ದೀನ್ ಬಾಗ್ಬಾನ್ ಚೌಧರಿ ಮತ್ತು ಕಾರ್ಯದರ್ಶಿ ಹೈದರ್ ಅಲಿ ಬಾಗ್ಬಾನ್ ಅವರು ಸಾಧಕರಿಗೆ ಸನ್ಮಾನಿಸಿದರು. ಅವರು ತಮ್ಮ ಭಾಷಣಗಳಲ್ಲಿ ಸಾಧಕರ ಶ್ರಮವನ್ನು ಶ್ಲಾಘಿಸಿ, ಅವರ ಸಾಧನೆಗಳು ಕಲಬುರಗಿಗೆ ಹೆಮ್ಮೆ ತಂದಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜಕೀಯ ಮುಖಂಡ ಅಝ್ಗರ್ ಚುಲ್ಬುಲ್, ಸಾಹಿತ್ಯ ರಂಗದ ಅಝೀಮುದ್ದೀನ್ ಶಿರ್ನಿಫರೋಶ್, ಲೇಖಕ ಸಾದಿಕ್ ಕಿರ್ಮಾನಿ, ರಿಜ್ವಾನ್ ಉರ್ ರಹ್ಮಾನ್ ಸಿದ್ದೀಕಿ, ಮಂಜೂರ್ ವಿಖಾರ್, ಮುಜೀಬ್ ಅಲಿ ಖಾನ್, ಯೂಸುಫ್ ಮಿನಿಯಾರ್ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







