ಕಲಬುರಗಿ | ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ಅಶೋಕ್ ಬಗಲಿ ಆಯ್ಕೆ

ಕಲಬುರಗಿ : ಭಾರತೀಯ ಜನತಾ ಪಾರ್ಟಿಯ ಕಲಬುರಗಿ ದ ನೂತನ ಜಿಲ್ಲಾಧ್ಯಕ್ಷರಾಗಿ ಅಶೋಕ್ ಬಗಲಿ ಅವರು ಆಯ್ಕೆಯಾಗಿದ್ದಾರೆ.
ಇಲ್ಲಿನ ನಗರದ ಬಿಜೆಪಿ ಕಚೇರಿಯಲ್ಲಿ ನಿರ್ಗಮಿತ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಅವರು ನೂತನವಾಗಿ ನೇಮಕಗೊಂಡ ಅಶೋಕ್ ಬಗಲಿ ಅವರಿಗೆ ಪಕ್ಷದ ಧ್ವಜವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ದಯಾನಂದ್ ಧಾರವಾಡಕರ್, ಸಿದ್ದಾಜೀ ಪಾಟೀಲ್, ಶರಣಪ್ಪ ತಳವಾರ, ಶಿವಯೋಗಿ ನಾಗನಹಳ್ಳಿ, ನಿಂಗರಾಜ ಬಿರಾದರ್, ಮಹದೇವ್ ಬೆಳಮಗಿ, ಧರ್ಮಣ್ಣ ಇಟಗೆ, ಚಂದ್ರಶೇಖರ್ ರೆಡ್ಡಿ, ಸಂತೋಷ್ ಹಾದಿಮನಿ, ವಿದ್ಯಾಸಾಗರ ಕುಲಕರ್ಣಿ, ಆನಂದ್ ಪಾಟೀಲ್, ವೀರು ಪಾಟೀಲ್, ಚಂದಮ್ಮ ಪಾಟೀಲ್, ಗೌರಿ ಚಿಟ್ಕೋಟಿ, ಭಾಗೀರಥಿ ಗುನ್ನಾಪುರ, ಮಹೇಂದ್ರ ಪೂಜಾರಿ ಸೇರಿದಂತೆ ಇತರರು ಹಾಜರಿದ್ದರು.
Next Story





