ಕಲಬುರಗಿ | ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಪ್ರದಾನ

ಕಲಬುರಗಿ: ನಾಡಪ್ರಭು ಕೆಂಪೇಗೌಡ ಅವರ 516ನೇ ಜಯಂತಿ ನಿಮಿತ್ತ ಶಹಾಬಾದ್ ತಹಶೀಸಿಲ್ದಾರ್ ಕಚೇರಿ ಆವರಣದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಮಣ್ಣೂರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಂಸ್ಥಾಪಕರು, ನಿರ್ದೇಶಕ ಹಾಗೂ ಸಮಾಜ ಸೇವಕರಾದ ಡಾ. ಫಾರೂಕ್ ಮಣ್ಣೂರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಚಂಪಾಬಾಯಿ ರಾಜು ಮೀಸ್ತ್ರಿ, ಡಾ.ಎಂ.ಎ.ರಶೀದ್ ಮರ್ಚೆಂಟ್, ಜಗದೀಶ್ ಎಸ್ ಚೋರ ತಹಶೀಲ್ದಾರರು ಹಾಗೂ ತಾಲೂಕು ಕಾರ್ಯನಿರ್ವಹಿಕ ದಂಡಾಧಿಕಾರಿ ಸುನಿತಾ ಪೋಲೆ, ಅಮೃತ್ ರಾವ್ ಗೌಡ ಪಾಟೀಲ್ ಬಂಕುರ, ನಿಮಿಷ ಜಿರೋಳ್ಳಿ ವಾಡಿ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
Next Story





