ಕಲಬುರಗಿ | ಸಾಮಾಜಿಕ ಸೇವೆ ಗುರುತಿಸಿ ಮುಹಮ್ಮದ್ ಇಕ್ಬಾಲ್ ಅಲಿಗೆ ಪ್ರಶಸ್ತಿ

ಕಲಬುರಗಿ: ಸಾಮಾಜಿಕ ಸೇವೆಗಾಗಿ ಇಂಡಿಯಾ ಬೈತುಲ್ ಮಾಲ್ ಟ್ರಸ್ಟ್‌ನ ಮುಹಮ್ಮದ್ ಇಕ್ಬಾಲ್ ಅಲಿ ಅವರಿಗೆ ಕಲಬುರಗಿ ಅಭಿವೃದ್ಧಿಪರ ಸಮಿತಿ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ನಗರದ ದರ್ಗಾ ರಸ್ತೆಯ ಹಿದಾಯತ್ ಸೆಂಟರ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಕಲಬುರಗಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅವರು ನೀಡಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚಿತ್ತಾಪುರದ ಸೋಮಶೇಖರ್ ಶಿವಾಚಾರ್ಯ, ರೆವರೆಂಡ್ ಸ್ಯಾಮ್ಯುಯೆಲ್ ಭಾಲೇಕರ್, ಖಾಜಿ ರಿಜ್ವಾನ್ ಉರ್ ರೆಹಮಾನ್ ಸಿದ್ದೀಕಿ, ಮಲ್ಲಣ್ಣ ಮಡಿವಾಳ, ಲೂಯಿಸ್ ಕೋರಿ, ಶಿವಕುಮಾರ್ ಬಾಳಿ, ಮಲ್ಲಿನಾಥ ಬಿರಾದಾರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
Next Story





