ಕಲಬುರಗಿ | ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಬಗ್ಗೆ ಜಾಗೃತಿ ಅಗತ್ಯ : ಡಾ.ಶಂಕ್ರಪ್ಪ ಮೈಲಾರಿ

ಕಲಬುರಗಿ: ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆಗಳು, ಮಕ್ಕಳ ಹಕ್ಕುಗಳು, ಶಿಕ್ಷಣ ಆರೋಗ್ಯ ಮತ್ತು ಷೋಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ವಿಭಾಗೀಯ ಜಂಟಿ ನಿರ್ದೇಶಕರ ಕಾರ್ಯಾಲಯದ ಕಲಬುರಗಿಯ ವಿಭಾಗೀಯ ಸಹ ನಿರ್ದೇಶಕ ಡಾ.ಶಂಕ್ರಪ್ಪ ಮೈಲಾರಿ ಹೇಳಿದರು.
ನಗರದ ಜಿಮ್ಸ್ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಸಂಸ್ಥೆ ಆಸ್ಪತ್ರೆಯ ಮೂರನೇ ಮಹಡಿ, ಪಿ ಎನ್ ಸಿ ವಾರ್ಡ್ ನಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸಕ್ಷಮ ಪ್ರಾಧಿಕಾರ ಪಿಸಿಪಿ ಎನ್‌ಡಿಟಿ ಕಾಯ್ದೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಮ್ಸ್ ಜಿಲ್ಲಾ ಆಸ್ಪತ್ರೆ ಕಲಬುರಗಿ ಸಹಯೋಗದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಜ್ವಲ ಭವಿಷ್ಯಕ್ಕಾಗಿ ಹೆಣ್ಣು ಮಕ್ಕಳನ್ನು ಸಬಲಿಕರಣಗೊಳಿಸುವುದು ಎಂಬುದು ಪ್ರಸಕ್ತ ಸಾಲಿನ ಘೋಷವಾಕ್ಯವಾಗಿದೆ. ಇಂದು ಹೆಣ್ಣುಮಕ್ಕಳು ಸಂಸಾರವನ್ನು ನಿಭಾಯಿಸುವುದರ ಜೊತೆಗೆ ಎಲ್ಲಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕುಟುಂಬ ಮತ್ತು ಕಲ್ಯಾಣ ಅಧಿಕಾರಿ ಡಾ.ಶರಣಬಸಪ್ಪ ಖ್ಯಾತನಾಳ ಮಾತನಾಡಿ, ಗಂಡು ಮಗುವಿಗೆ ನಾವು ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆ, ಅಷ್ಟೇ ಹೆಣ್ಣು ಮಗುವಿಗೂ ಕೊಡಬೇಕು ಎಂದ ಅವರು, ಹೆಣ್ಣು ಶಿಶು ಭ್ರೂಣ ಹತ್ಯೆ, ದೈಹಿಕ ದೌರ್ಜನ್ಯ ಸೇರಿದಂತೆ ಇನ್ನಿತರ ಸಮಸ್ಯೆ ಕುರಿತು ಬೆಳಕು ಚೆಲ್ಲುವ ಕೆಲಸವಾಗಬೇಕು ಎಂದು ತಿಳಿಸಿದರು.
ಜಿಮ್ಸ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞ ಡಾ.ರೂಖೀಯಾ ಆಸ್ನಾ ರಬಾ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಪಿ ಸಿ ಮತ್ತು ಎನ್ ಡಿ ಟಿ ನೋಡಲ್ ಅಧಿಕಾರಿ ಡಾ.ಶಿವಶರಣಪ್ಪ ಎಂ.ಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಕಾವೇರಿ ದೊಡ್ಡಮನಿ, ಡಾ. ಶೋಭಾ ಪಾಟೀಲ, ಡಾ.ಶೀತಲ್ ಕೋರವಾರ, ಡಾ. ಪೂರ್ಣಿಮಾ ಪಾಟೀಲ, ಡಾ. ನಸ್ರತ್ ಜಾನ್, ಡಾ. ಸಾವಿತ್ರಿ, ಮಂಗಳ ರಾವೂರ, ಗುರುಲಿಂಗಮ್ಮ ರೆಡ್ಡಿ ಅವರು ವೇದಿಕೆ ಮೇಲೆ ಇದ್ದರು.
ಕಾರ್ಯಕ್ರಮದ ಪ್ರಮುಖರಾದ ಜಿಲ್ಲಾ ಕಾಯಕಲ್ಪ ಸಲಹೆಗಾರರು ಮಹಮ್ಮದ್ ಇರ್ಫಾನ್, ನರ್ಸಿಂಗ್ ಆಫೀಸರ್ ಮೀನಾಕ್ಷಿ, ಸೀತಾ, ಮಂಗಳ ರೆಡ್ಡಿ. ಜಿಲ್ಲಾ ಆರೋಗ್ಯ ಜಿಲ್ಲಾ ಮಕ್ಕಳ ಅರೋಗ್ಯ ಸಮಾಲೋಚಕ ಮಂಜುನಾಥ ಕಂಬಾಳಿಮಠ, ಸೋಶಿಯಲ್ ವರ್ಕರ್ ದೀಪಾಶ್ರೀ ಸಿಂಧೆ, ಆರ್ ಎಂ ಎನ್ ಸಿ ಪ್ಲಸ್ ಸಮಾಲೋಚಕಿ ಗೀತಾ ಕುಂಬಾರ, ಡಿಓ ಗಳಾದ ಕೌಶಿಕ, ರವಿಚಂದ್ರ ಪೂಜಾರಿ. ಜಿಲ್ಲಾ ಆಸ್ಪತ್ರೆಯ ಸಿಬ್ಬಂಬದಿಗಳು ಭಾಗವಹಿಸಿದ್ದರು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಸುಜಾತಾ ಪಾಟೀಲ ನಿರೂಪಿಸಿ, ವಂದಿಸಿದರು.







