ಕಲಬುರಗಿ | ಶಾಲಾ ಮಕ್ಕಳಿಂದ ಕಾಡು ಬೆಳೆಸಿ ನಾಡು ಉಳಿಸಿ ಜಾಗೃತಿ ಅಭಿಯಾನ

ಕಲಬುರಗಿ : ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಪರಿಸರ ಸಂರಕ್ಷಣಾ ಕುರಿತು ಕಾಡು ಬೆಳೆಸಿ ನಾಡು ಉಳಿಸಿ, ಹಸಿರೆ ನಮ್ಮ ಉಸಿರು ಜಾಗೃತಿ ಅಭಿಯಾನ ನಡೆಯಿತು.
ಎಸ್.ಡಿ.ಎಮ್.ಸಿ ಅಧ್ಯಕ್ಷ ಸಿದ್ದಲಿಂಗ ಅಡವಿ, ಉಪಾಧ್ಯಕ್ಷರಾದ ಸರಸ್ವತಿ ಸಿಂಗೆ, ಸದಸ್ಯರು ರಾಮಪ್ಪ ನಡಗಟ್ಟಿ, ಶಾಂತಬಾಯಿ ಕಡಬಿನ್, ಜಯಶ್ರೀ ಭಂಗಿ, ಶಿಕ್ಷಣ ಪ್ರೇಮಿಗಳ ದೇವೇಂದ್ರ ನಡಗಟ್ಟಿ, ಭೂತಾಳಿ ನಡಗಟ್ಟಿ ಉಪಸ್ಥಿತಿ ಇದ್ದರು.
ಶಾಲೆಯ ಮುಖ್ಯ ಗುರುಗಳಾದ ಅಶೋಕ ಅವರು ಉಪನ್ಯಾಸ ನೀಡಿದರು. ದೇವಿಂದ್ರ ನಡಗಟ್ಟಿ ಪರಿಸರ ಬಗ್ಗೆ ಮಕ್ಕಳಿಗೆ ಪ್ರಸ್ತಾವಿಕ ಮಾತನಾಡಿದರು.
Next Story