ಕಲಬುರಗಿ | ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಪರಿಸರ ಕಾಪಾಡಿ : ಐ.ಕೆ.ಪಾಟೀಲ್

ಕಲಬುರಗಿ: ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಪರಿಸರ ಉಳಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಧ್ಯಮ ಸಂಯೋಜಕ ಹಾಗೂ ಉಪನ್ಯಾಸಕ ಐ.ಕೆ ಪಾಟೀಲ್ ಹೇಳಿದರು
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಶಿಲ್ಪಾ ಅಲ್ಲದ, ಉಪನ್ಯಾಸಕರಾದ ಡಾ.ಪಾಂಡುರಂಗ ಚಿಂಚನಸೂರ, ಚಂದ್ರಶೇಖರ ಪಟ್ಟಣಕರ, ಕೃಷ್ಣವೇಣಿ ಪಾಟೀಲ್, ಸಂಗೀತಾ ಸಡಕೀನ, ಅಶ್ವಿನಿ ಪಾಟೀಲ್, ವಿಜಯಲಕ್ಷ್ಮಿ ಶಾಬಾದಿ, ಶ್ವೇತಾ ಶೆಟ್ಟಿ, ಮಲಕಮ್ಮ ಪಾಟೀಲ್ ಪಾಟೀಲ್, ಮಧುಶ್ರೀ ಘಂಟಿ, ರುದ್ರಾಂಬಿಕಾ ಕಿರಾಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Next Story





