ಕಲಬುರಗಿ | ಪರಿಸರದ ಉಳಿವಿನ ಹಿಂದೆ ನಮ್ಮೆಲ್ಲರ ಅಳಿವು ಉಳಿವು ಅಡಗಿದೆ : ಡಾ.ಜಯಶ್ರೀ ಮುದ್ದಾ

ಕಲಬುರಗಿ: ನಾವೆಲ್ಲರೂ ಪರಿಸರದ ಕೂಸುಗಳು. ಪರಿಸರದ ಉಳಿವಿನ ಹಿಂದೆ ನಮ್ಮೆಲ್ಲರ ಅಳಿವು ಉಳಿವು ಅಡಗಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್ ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಜಯಶ್ರೀ ಮುದ್ದಾ ಹೇಳಿದರು.
ಅವರು ಕಾಲೇಜಿನ ಪಬ್ಲಿಕ್ ಹೆಲ್ತ್ ಡೆಂಟಿಸರಿ ವಿಭಾಗದ ನೇತೃತ್ವದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ವಿಶ್ವ ಪರಿಸರ ದಿನಾಚರಣೆಯು ಕೆವಲ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ಎಲ್ಲರೂ ಸ್ವಚ್ಛ ಪರಿಸರಕ್ಕೆ ಪಣ ತೊಟ್ಟು ಕೆಲಸ ಮಾಡಬೇಕು. ಯುವಕರು ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಉಪ ಪ್ರಾಚಾರ್ಯರಾದ ಡಾ.ವೀರೆಂದ್ರ ಪಾಟೀಲ್, ವಿಭಾಗದ ಮುಖ್ಯಸ್ಥರಾದ ಡಾ.ನವೀನ್ ಕಾರಬಾರಿ, ಡಾ.ಸುಭಾಷ್ ಪಾಟೀಲ್, ಡಾ.ಸುವರ್ಣ ಬಿರಾದಾರ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮ ಬಳಿಕ ಕಾಲೇಜಿನ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು.