ಕಲಬುರಗಿ | ಬೈಕ್ ಢಿಕ್ಕಿ : ಇಬ್ಬರಿಗೆ ಗಾಯ

ಕಲಬುರಗಿ: ರಸ್ತೆ ದಾಟುತ್ತಿದ್ದಾಗ ವೃದ್ಧನಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹಾಗೂ ಪಾದಚಾರಿ ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ರಿಂಗ್ ರಸ್ತೆಯ ಬಾಕೆರ್ ಸರ್ಕಲ್ ಬಳಿ ನಡೆದಿದೆ.
ಬೈಕ್ ಸವಾರ ಇಮ್ತಿಯಾಝ್ ಉಲ್ಲಾ ಹಾಗೂ ಪಾದಚಾರಿ ಅಬ್ದುಲ್ ಖಾದಿರ್ ಗಾಯಗೊಂಡವರು. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸ್ ಠಾಣೆ-2ರ ಪಿಎಸ್ಐ ಸುಮಂಗಲಾ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story





