ಕಲಬುರಗಿ | ದೇವಸ್ಥಾನದ ಬಳಿ ನಿಲ್ಲಿಸಿದ ಬೈಕ್ ಕಳವು : ಪ್ರಕರಣ ದಾಖಲು

ಕಲಬುರಗಿ: ದೇವಸ್ಥಾನ ಬಳಿ ನಿಲ್ಲಿಸಿದ ಸ್ಪ್ಲೆಂಡರ್ ಬೈಕ್ ವೊಂದನ್ನು ಕಳ್ಳರು ಎಗರಿಸಿದ ಘಟನೆ ಕಮಲಾಪುರ ತಾಲ್ಲೂಕಿನ ಜವಳಗಾ (ಬಿ) ಗ್ರಾಮದಲ್ಲಿ ನಡೆದಿದೆ.
ಅದೇ ಗ್ರಾಮದ ಯಲ್ಲಾಲಿಂಗ ಪೂಜಾರಿ ಎಂಬಾತರಿಗೆ ಸೇರಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಎಂದಿನಂತೆ ಬೈಕ್ ನಿಲ್ಲಿಸಿ ದೇವಸ್ಥಾನದಲ್ಲಿ ಮಲಗಲು ಹೋಗಿದ್ದ ಯಲ್ಲಾಲಿಂಗರ ಬೈಕ್ ಕಳವು ಆಗಿದೆ.
ಈ ಕುರಿತು ಯಲ್ಲಾಲಿಂಗ ನೀಡಿದ ದೂರಿನ ಮೇರೆಗೆ ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





