ಕಲಬುರಗಿ | ಬೈಕ್-ಟ್ರಾಕ್ಟರ್ ನಡುವೆ ಢಿಕ್ಕಿ : ಸವಾರ ಮೃತ್ಯು

ವಿಲಾಸ್ ಭೀಮಣ್ಣ ಹೂಗಾರ
ಕಲಬುರಗಿ: ಟ್ರಾಕ್ಟರ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿ ಮೃತಪಟಿರುವ ಘಟನೆ ಜೇವರ್ಗಿ ಪಟ್ಟಣದ ಹೊರವಲಯದ ಸಿದ್ದಸಿರಿ ಪೆಟ್ರೋಲ್ ಬಂಕ್ ಹತ್ತಿರ ನಡೆದಿದೆ.
ಮೃತರನ್ನು ಜೇವರ್ಗಿ ಪಟ್ಟಣದ ಶಿಕ್ಷಕರ ಕಾಲೋನಿ ನಿವಾಸಿ ವಿಲಾಸ್ ಭೀಮಣ್ಣ ಹೂಗಾರ (32 ) ಎಂದು ಗುರುತಿಸಲಾಗಿದೆ.
ಭೀಮಣ್ಣ ಕೆಲಸ ಮುಗಿಸಿಕೊಂಡು ಚೌಡಾಪುರ್ ದಿಂದ ಜೇವರ್ಗಿ ಕಡೆಗೆ ವಾಪಸ್ ಬರುವಾಗ ಟ್ರಾಕ್ಟರ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Next Story





