ಕಲಬುರಗಿ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಎಸ್.ಸಿ ಮೋರ್ಚಾ ವತಿಯಿಂದ ಪ್ರತಿಭಟನೆ

ಕಲಬುರಗಿ: ಹುಬ್ಬಳ್ಳಿಯ ಇನಾಮ ವೀರಪೂರ ಗ್ರಾಮದ ಮಾನ್ಯಾ ಎಂಬ ಬಾಲಕಿಯ ಕೊಲೆ ಹಾಗೂ ವಿವೇಕಾನಂದ ಎಂಬುವವರ ಕುಟುಂಬದ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ನಗರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್ ಜೀನಕೇರಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ತಮಟೆ ಬಾರಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಬಳಿಕ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮಾನ್ಯಳನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಸಂತ್ರಸ್ತ ಕುಟುಂಬಕ್ಕೆ ತಕ್ಷಣವೇ 1 ಕೋಟಿ ರೂ. ಪರಿಹಾರ ಘೋಷಿಸಬೇಕು. ದೌರ್ಜನ್ಯಕ್ಕೊಳಗಾದ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಹಾಗೂ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ದಲಿತರ ಹಾಗೂ ದಲಿತ ಮಹಿಳೆಯರ ಮೇಲೆ ಹಲ್ಲೆ, ಕಗ್ಗೋಲೆಗಳು ನಿರಂತರವಾಗಿ ನಡೆಯುತ್ತಿವೆ. ದಲಿತರ ಬಗ್ಗೆ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲ ಎಂದು ದೂರಿದರು.
ಅಲ್ಲದೆ, ಎಸ್‌ಇಪಿ ಮತ್ತು ಎಸ್‌ಟಿಪಿ (SEP/STP) ಯೋಜನೆಗಳ ಅಡಿಯಲ್ಲಿ ದಲಿತರಿಗೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಗ್ರಾಮೀಣ ಜಿಲ್ಲಾ ಅಧ್ಯಕ್ಷ ಅಶೋಕ ಬಗಲಿ, ಬಿಜೆಪಿ ಮುಖಂಡರಾದ ಅಂಬಾರಾಯ ಅಷ್ಟಗಿ, ಅವಣ್ಣ ಮ್ಯಾಕೇರಿ, ರಾಜು ವಾಡೇಕರ್, ಗೀತಾ ವಾಡೇಕಾರ, ಡಾ.ಸುಧಾ ಹಾಲಕಾಯಿ, ರಮೇಶ ವಾಡೇಕರ್, ಬಸವರಾಜ ಬೆಣ್ಣೂರ, ಗೋಪಾಲರಾವ ಕಟ್ಟಿಮನಿ, ರಾಜು ಕಟ್ಟಿಮನಿ, ಪ್ರದೀಪ ಭಾವೆ, ರಂಜಿತ ಮೂಲಿಮನಿ, ಬಂಡೇಶ ರಟ್ನಡಗಿ, ಮಲ್ಲಿಕಾರ್ಜುನ ಸರಡಗಿ, ಅಂಬಾರಾಯ ಬೆಳಕೋಟಾ, ವಿನೋದ ಓಂಕಾರ, ಅಮೃತ ಸಾಗರ, ರವಿ ಸಿಂಗೆ, ಸುರೇಶ ಹೊಸಮನಿ, ನಾಗರಾಜ ಸೋಲಾಪೂರ, ಅನೀಲ ಬೆಳಕೇರಿ, ಮಂಜುನಾಥ ನಾಲವಾರಕರ್, ಅಭಿ ಹಾದಿಮನಿ, ಪ್ರದೀಪ ಬಾಚನಾಳ, ಮನೋಹರ ಬಿರನೂರ, ಪ್ರಹ್ಲಾದ ಹಡಗಿಲಕರ್, ಸಿದ್ರಾಮ ಹೊಸಮನಿ, ಗುಂಡೇಶ ಶಿವನೂರ, ಗುಂಡು ಸಂಗವಾರ, ಹರಿಶ್ಚಂದ್ರ ದೊಡ್ಡಮನಿ, ಧರ್ಮಣ್ಣಾ ಇಟಗಾ, ಆನಂದ ಚವ್ಹಾಣ, ಹಣಮಂತ ರಾಠೋಡ, ಅನೀಲ ಜಾಧವ, ರವಿ ರಾಜಾಪೂರ, ಶ್ರೀನಿವಾಸ ದೇಸಾಯಿ, ಹಣಮಂತ ವಚ್ಚಾ, ಬಾಲರಾಜ, ದತ್ತು ದುಲಾರೆ. ಮೋಹನ ಹೊನಗುಂಟಾ, ಮಹೇಶ ಮೂಲಿಮನಿ, ರಾಜು ಹದನೂರ, ಮೋಹನ ಹಯ್ಯಾಳಕರ್, ಹಣಮಂತ ರತ್ನಡಗಿ, ರಾಜು ತೇಲಂಗಿ, ಮಲ್ಲಪ್ಪಾ ಮಾದರ, ಪೃಥ್ವಿರಾಜ ರಾಮಪೂರೆ, ರಾಕೇಶ ವಾಡೇಕರ್, ಶರಣು ಟೈಗರ, ರವಿಚಂದ್ರ ಕಂಠಿಕರ್, ಶಿವರಾಜ ಕೋರಳ್ಳಿ ಸಚೀನ ಕಟ್ಟಿಮನಿ, ಚಂದು ಕಟ್ಟಿಮನಿ, ಜಾನ ಶಿವನೂರ, ಆನಂದ ಕೊಳ್ಳೂರ, ರಾಜು ಮುಕ್ಕಣ್ಣ, ದೀಪಕ ಹೊಸೂರಕರ್, ಶ್ರೀಶೈಲ ಎಂ.ಜಿ., ಭೀಮು ಹಳ್ಳಿ, ಅಮೃತ ಕೋರಳ್ಳಿ ಸೇರಿದಂತೆ ಹಲವರು ಇದ್ದರು.







