Kalaburagi | ದಾನಗಳಲ್ಲಿಯೇ ಶ್ರೇಷ್ಠವಾದ ದಾನ ರಕ್ತದಾನ : ದೊಡ್ಡಪ್ಪಗೌಡ ಪಾಟೀಲ್
ಸ್ವಯಂಪ್ರೇರಿತ ರಕ್ತದಾನ ಶಿಬಿರ

ಕಲಬುರಗಿ : ಆಪತ್ತಿನಲ್ಲಿರುವವರ ಜೀವ ಉಳಿಸಲು ರಕ್ತದಾನ ಬಹುದೊಡ್ಡ ಸಹಕಾರಿಯಾಗಿದೆ. ದಾನಗಳಲ್ಲಿಯೇ ರಕ್ತದಾನ ಶ್ರೇಷ್ಠವಾದುದು. ಹೀಗಾಗಿ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಬೋಳ ಹೇಳಿದರು.
ಜೇವರ್ಗಿ ಪಟ್ಟಣದಲ್ಲಿ ಶ್ರೀ ಮರಗಮ್ಮ (ಕಲ್ಕತ್ತ) ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಅಂತರರಾಷ್ಟ್ರೀಯ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಬಜರಂಗದಳದ ಜೇವರ್ಗಿ ಘಟಕದ ವತಿಯಿಂದ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾತ್ರಾ ಮಹೋತ್ಸವದ ಪವಿತ್ರ ಸಂದರ್ಭದಲ್ಲಿ ಇಂತಹ ಸಮಾಜಮುಖಿ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ‘ಒಂದು ಹನಿ ರಕ್ತ, ಇನ್ನೊಬ್ಬರ ಜೀವಕ್ಕೆ ಆಸರೆ’ ಎಂಬ ತತ್ತ್ವದಡಿ ಆಯೋಜಿಸಲಾದ ಈ ಶಿಬಿರದಲ್ಲಿ ಜೇವರ್ಗಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಯುವಕರು ಮತ್ತು ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುತ್ತಿರುವುದು ಇತರರಿಗೆ ಪ್ರೇರಣೆಯಾಗಿದೆ. ಆಪತ್ತಿನಲ್ಲಿರುವವರ ಜೀವ ಉಳಿಸಲು ರಕ್ತದಾನ ಬಹುದೊಡ್ಡ ಸಹಕಾರಿಯಾಗಿದೆ. ದಾನಗಳಲ್ಲಿಯೇ ಶ್ರೇಷ್ಠವಾದ ರಕ್ತದಾನ ಮಾಡಲು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಪ್ರಭುಲಿಂಗ ಮಾನಕರ್, ರಮೇಶ್ ಎನ್. ವಕೀಲ್, ಬಸವರಾಜ ಪಾಟೀಲ್ ನರಿಬೋಳ, ಷಣ್ಮುಖಪ್ಪ ಸಾಹು ಗೋಗಿ, ಡಾ. ಮಹೇಶ್ ಸಜ್ಜನ್, ಡಾ. ಅರೋಸ್ ನಿಶಾತ್, ಶಂಕರಗೌಡ ಪಾಟೀಲ್ ಹಾಲಗಡ್ಲಿ, ಸಿದ್ದು ಅಂಗಡಿ, ರವಿ ಕೊಳಕೂರು, ಮಲ್ಲಿಕಾರ್ಜುನ ಅದ್ವಾನಿ, ಲಕ್ಷ್ಮೀಕಾಂತ ಕುಲಕರ್ಣಿ ಹೋತಿನಮಡು, ನಾಗರಾಜ ಓಂ, ಶಿವಕುಮಾರ ಕಲ್ಲಾ, ಬಸವರಾಜ ಕೊಳಕೂರ, ಪ್ರಭುಲಿಂಗ ಕುಕುನೂರು, ಮಲ್ಲಿಕಾರ್ಜುನ ಪೂಜಾರಿ, ಷಣ್ಮುಖಯ್ಯ ಫಿರೋಜಾಬಾದ, ನಿಂಗರಾಜ ವಿಶ್ವಕರ್ಮ, ಗುಂಡು ಬಡಿಗೇರ, ಸಿದ್ದು ಪಾಟೀಲ, ಲಕ್ಷ್ಮೀಕಾಂತ ವಿಶ್ವಕರ್ಮ, ನೀಲಕಂಠ ಮಠಪತಿ, ಮಲ್ಲಿಕಾರ್ಜುನ ಸಜ್ಜನ, ಚಂದ್ರಶೇಖರ್ ಜೈನಾಪುರ, ವಿಕ್ರಮ ಬಡಿಗೇರ, ಬಸವರಾಜ ಹುಗ್ಗಿ, ಅಮರ ಸಾಲಕೀ, ಬಸವರಾಜ ತಳವಾರ, ಆಕಾಶ ಕೊಳಕೂರು, ವಸಂತ ವಿಶ್ವಕರ್ಮ, ದೇವು ಸುಬೇದಾರ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಶಬ್ಬೀರ್ ಅಹಮದ್, ರೇವಣಸಿದ್ದಯ್ಯ, ಜ್ಯೋತಿ, ಮಹಾದೇವಿ, ಭಾಗ್ಯಶ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.






