Kalaburagi | ರೈಲ್ವೆ ಸೇತುವೆ ಬಳಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

ಸಾಂದರ್ಭಿಕ ಚಿತ್ರ
ಕಲಬುರಗಿ: ವಾಡಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೇನಂದೂರು ಮತ್ತು ರೈಲು ನಿಲ್ದಾಣದ ನಡುವಿನ ರೈಲ್ವೆ ಸೇತುವೆಯ ಮೇಲಿನ ಅಪ್ ರೈಲು ಹಳಿಯಲ್ಲಿ ಸುಮಾರು 55ರಿಂದ 60 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ನ.25ರಂದು ಮೃತದೇಹ ಪತ್ತೆಯಾಗಿದ್ದು, ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್. ಸಂಖ್ಯೆ 107/2026ರ ಅಡಿಯಲ್ಲಿ ಬಿಎನ್ಎಸ್ ಕಲಂ 194ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮೃತ ಮಹಿಳೆ ಸುಮಾರು 5.4 ಅಡಿ ಎತ್ತರ, ಸಾಧಾರಣ ಮೈಕಟ್ಟು ಹಾಗೂ ಮೈಬಣ್ಣ ಹೊಂದಿದ್ದು, ದುಂಡು ಮುಖ ಮತ್ತು ಉದ್ದನೆಯ ಮೂಗು ಹೊಂದಿದ್ದಾರೆ. ತಲೆಯಲ್ಲಿ ಸುಮಾರು 10 ಕಪ್ಪು-ಬಿಳಿ ಮಿಶ್ರಿತ ಕೂದಲುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹದ ಮೇಲೆ ಗುಲಾಬಿ ಬಣ್ಣದ ಸ್ವೆಟರ್, ಪಿಂಕ್ ಬಣ್ಣದ ಬ್ಲೌಸ್ ಹಾಗೂ ಕಂದು ಬಣ್ಣದ ಹರಿದ ಸೀರೆ ಇತ್ತು. ಕಪ್ಪು ಬಣ್ಣದ ಸ್ಲಿಪ್ಪರ್ ಧರಿಸಿದ್ದು, ಕುತ್ತಿಗೆಯಲ್ಲಿ ಲಿಂಗದ ಆಕಾರದ ಲಾಕೆಟ್ ಇರುವ ಸರವಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತ ಮಹಿಳೆಯ ವಾರಸುದಾರರು ಅಥವಾ ಅವರ ಗುರುತು ತಿಳಿದವರು ವಾಡಿ ರೈಲ್ವೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ 080-22871291, ವಾಡಿ ರೈಲ್ವೆ ಪೊಲೀಸ್ ಠಾಣೆ 08476-202244 ಅಥವಾ ಪೊಲೀಸ್ ಉಪನಿರೀಕ್ಷಕರ ಮೊಬೈಲ್ ಸಂಖ್ಯೆ 9480802132 ಅನ್ನು ಸಂಪರ್ಕಿಸಬಹುದು.






