ಕಲಬುರಗಿ | ಸಾರಿಗೆ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣ : ಕಠಿಣ ಕ್ರಮಕ್ಕೆ ಜಯ ಕರ್ನಾಟಕ ಸಂಘಟನೆ ಆಗ್ರಹ

ಕಲಬುರಗಿ: ಬೆಳಗಾವಿ ಜಿಲ್ಲೆಯ ಬಾಳೆಕುಂದ್ರಿಯಲ್ಲಿ ಕೆ.ಎಸ್.ಎಸ್.ಆರ್.ಟಿ.ಸಿ.ಯ ನಿರ್ವಾಹಕ ಮತ್ತು ಚಾಲಕ ಮೇಲಿನ ಹಲ್ಲೆಯನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಮುಖಂಡರು ನಗರ ಪೊಲೀಸ್ ಆಯುಕ್ತರ ಮುಖಾಂತರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಫೆ. 21 ರಂದು ಬೆಳಗಾವಿ ಜಿಲ್ಲೆಯ ಬಾಳೆಕುಂದ್ರಿಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕ ಟಿಕೆಟ ಪಡೆದುಕೊಳ್ಳಿ ಎಂದು ತಿಳಿಸಿದ ಕಾರಣಕ್ಕೆ ಹಣ ಕೊಟ್ಟು ಟಿಕೆಟ ಪಡೆಯುವ ಬದಲು ಕನ್ನಡ ಮಾತನಾಡುತ್ತಿಯ ಎಂದು ಗದರಿಸಿ ಮರಾಠಿ ಮಾತನಾಡು ಎಂದು ನಿರ್ವಾಹಕ(ಕಂಡೆಕ್ಟರ) ಮೇಲೆ ಹಲ್ಲೆ ಮಾಡಿ ನಂತರ ಗ್ರಾಮದ ಅನೇಕ ಜನರನ್ನು ಕರೆಯಿಸಿ ಬಸ್ ತಡೆದು ಪುನಃ ಗುಂಪಿನ ಜೊತೆಗೋಡಿ ನಿರ್ವಾಹಕ ಮತ್ತು ಚಾಲಕ ಇಬ್ಬರ ಮೇಲೆ ಹಲ್ಲೆಯನ್ನು ಮಾಡಿರುವುದು ಸಂಘಟನೆ ತೀವ್ರವಾಗಿ ಖಂಡಿಸಿದೆ.
ಹಲ್ಲೆ ಮಾಡಿರುವ ಕನ್ನಡ ಕರ್ನಾಟಕ ವಿರೋಧಿ ದ್ರೋಹಿಗಳನ್ನು ಬರೆ ಭಂದಿಸುವುದು ಸಾಲದು ಇಂತಃ ಕೃತ್ಯಗಳನ್ನು ಮರುಕಡಿಸಬಾರದೆಂದರೆ ಹಲ್ಲೆಗೊಳದಾದ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಮತ್ತು ಉಳಿದ ಚಾಲಕರಗಳ ಹಾಗೂ ನಿರ್ವಾಹಕರುಗಳ ನಿರ್ಭೀತಿಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದರೆ ಹಲ್ಲೆ ಮಾಡಿದ ಪುಂಡರನ್ನು ಗಡಿಪಾರು ಮಾಡಿದರೆ ಇಂತಃ ಘಟನೆಗಳು ನಡೆಯದಂತೆ ಎಚ್ಚರಿಕೆ ಕೊಡಬೇಕು. ಹಲ್ಲೆ ಗೊಳಗಾದ ಇಲಾಖೆಯ ಸಿಬ್ಬಂದಿಗಳಿಗೆ ವೈಯಕ್ತಿಕವಾಗಿ ಮತ್ತು ಸಾರ್ವಜನಿಕವಾಗಿ ಹೇಳಿಕೆ ನೀಡಿ ಧೈರ್ಯ ತುಂಬುವ ಕೆಲಸ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರು ಹಾಗೂ ವಿಭಾಗೀಯ ಉಸ್ತುವಾರಿ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಸಾರವಾಡ, ಜಿಲ್ಲಾ ಸಂಘಟನ ಕಾರ್ಯಾದರ್ಶಿ ಸಂಬಾಜಿ ಪಿ.ಸೆ, ಯುವ ಘಟಕ ಅಧ್ಯಕ್ಷ ಆರ್ಯಾ ಸಿಂಗೆ, ಗೌರವ ಅಧ್ಯಕ್ಷ ರಾಜು ಕುಂಬಾರ, ಸಂಜುಕುಮಾರ ಸುಲ್ತಾನಪೂರ, ಭೀಮಾಶಂಕರ ಬಿಲ್ಲಾಡ, ಯಲ್ಲಪ್ಪ ದೊರೆ, ಶರಣಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.







