ಕಲಬುರಗಿ| ಜಾತಿ ನಿಂದನೆ ಆರೋಪ ; ನಟಿ ನಯನಾ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಕಲಬುರಗಿ: ಜಾತಿ ನಿಂದನೆ ಮಾಡಿರುವ ಆರೋಪದಲ್ಲಿ "ಕಾಮಿಡಿ ಖಿಲಾಡಿಗಳು" ಖ್ಯಾತಿಯ ನಟಿ ನಯನಾ ಅವರ ವಿರುದ್ಧ ಆಳಂದ ತಾಲೂಕಿನ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.
ಆಳಂದ ತಾಲೂಕಿನ ನಿಂಬರ್ಗಾ ವಲಯದ ದಲಿತ ಸೇನೆಯ ಅಧ್ಯಕ್ಷ ಶಶಿಧರ ನವರಂಗ, ದಶರಥ ಕಾಂಬಳೆ, ಶಿವಲಿಂಗ ಮಾಡ್ಯಾಳ, ಅಮೃತ್ ಯಳಸಂಗಿ, ಸಂವಿಧಾನ ಸಾಗರ್ ಅವರು ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜಾತಿ ನಿಂದನೆ ಆರೋಪಕ್ಕೆ ಸಂಬಂಧಿಸಿ ನಟಿ ನಯನಾ ವಿರುದ್ಧ ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿತ್ತು.
Next Story





