ಕಲಬುರಗಿ | ಸ್ವಾತಂತ್ರ್ಯ ಹೋರಾಟಗಾರರಲ್ಲಿ ಅಪ್ರತಿಮ ಹೋರಾಟಗಾರ ಚಂದ್ರಶೇಖರ ಆಝಾದ್ : ಜಗನ್ನಾಥ ಎಸ್.ಎಚ್.

ಕಲಬುರಗಿ : ಈ ದೇಶ ಕಂಡ ಭಾರತ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಅಪ್ರತಿಮ ಹೋರಾಟಗಾರ ಚಂದ್ರಶೇಖರ ಆಝಾದ್ ಎಂದು ಎಐಡಿವಾಯ್‍ಓ ಜಿಲ್ಲಾಧ್ಯಕ್ಷ ಜಗನ್ನಾಥ ಎಸ್.ಎಚ್. ಹೇಳಿದರು.
ಅವರು ಎಐಡಿವಾಯ್‍ಓ ಸಮಿತಿ ವತಿಯಿಂದ ರಾಮಘಡ ಆಶ್ರಯ ಕಾಲೋನಿಯಲ್ಲಿ ಚಂದ್ರಶೇಖರ ಆಝಾದ್ ಅವರ 94ನೇ ಹುತಾತ್ಮ ದಿನದ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬ್ರಿಟಿಷರಿಗೆ ಹಗಲಿರುಳು ಸಿಂಹಸ್ವಪ್ನವಾಗಿ ಕಾಡಿದರು. ಭಾರತ ಮಾತೆಯನ್ನು ಬಂಧಮುಕ್ತಳನ್ನಾಗಿ ಮಾಡಬೇಕೆಂದು ಪಣ ತೊಟ್ಟಿದ್ದರು. ಅದಕ್ಕಾಗಿ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನದೇ ಆದ ಪ್ರಭುತ್ವ ಸ್ಥಾಪಿಸಿದ ವೀರ. ಕ್ರಾಂತಿಯಿಂದಲೇ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಬೇಕು ಎಂಬುದು ಇವರ ಆಶಯವಾಗಿತ್ತು ಎಂದು ಹೇಳಿದರು.
ರಮೇಶ ದೇವಕರ್ ಮಾತನಾಡಿರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿ ಸದಸ್ಯರಾದ ಆನಂದ್ ದಂಡಗುಲಕರ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಯುವ ಘಟಕವನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಶ್ಯಾಮ್ ಪವಾರ, ಕಾರ್ಯದರ್ಶಿಯಾಗಿ ರಾಹುಲ್ ಜಿ.ಕೆ. ಹಾಗೂ ಸದಸ್ಯರಾಗಿ ಚಂದ್ರಕಾಂತ, ಆಕಾಶ, ರಾಜು,ಕಾರ್ತಿಕ, ಭೀಮಶಂಕರ ಆಯ್ಕೆ ಮಾಡಲಾಯಿತು.





