Kalaburagi | ಮುಂಬಡ್ತಿ ಪಡೆದ ಡಾ.ರುಬಿನಾ ಪರ್ವೀನ್‌ಗೆ ಸನ್ಮಾನ

ಕಲಬುರಗಿ: ಜೇವರ್ಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ (ಐಟಿಐ) ಪ್ರಾಚಾರ್ಯರಾದ ಡಾ. ರುಬಿನಾ ಪರ್ವೀನ್ ಅವರಿಗೆ ಇಲಾಖೆಯ ತರಬೇತಿ ವಿಭಾಗದ ಕಲ್ಯಾಣ ಕರ್ನಾಟಕ ವೃಂದದ ಗ್ರೂಪ್-ಬಿ ವೃಂದದ ಸಹಾಯಕ ನಿರ್ದೇಶಕರು (ತ)/ಪ್ರಾಚಾರ್ಯರು ದರ್ಜೆ-2 ಹುದ್ದೆಯಿಂದ ಗ್ರೂಪ್-ಎ ಹಿರಿಯ ಶ್ರೇಣಿ ವೃಂದದ ಉಪನಿರ್ದೇಶಕರು(ತ)/ಪ್ರಾಚಾರ್ಯರು ದರ್ಜೆ-1 ಹುದ್ದೆಗೆ ಮುಂಬಡ್ತಿ ದೊರೆತಿದೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಜೇವರ್ಗಿ ಐಟಿಐ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿ ಹಾಗೂ ಐ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು. ಇದೇ ವೇಳೆ ಕಲಬುರಗಿ ಜಿಲ್ಲೆಯ ವಿವಿಧ ಐಟಿಐ ಸಂಸ್ಥೆಗಳ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ನೂತನ ಉಪನಿರ್ದೇಶಕರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ತರಬೇತಿ ಅಧಿಕಾರಿ ಅಶೋಕಕುಮಾರ, ಕಚೇರಿ ಅಧೀಕ್ಷಕ ಶಿವರಾಜ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಶಿವಶರಣಪ್ಪ ಸ್ವಾಗತಿಸಿದರು, ಬಸನಗೌಡ ಪಾಟೀಲ ನಿರೂಪಿಸಿದರು ಹಾಗೂ ಸುಧಾಕರ ಎಸ್. ಚಿಕ್ಕಯ್ಯನವರ್‌ಮಠ ವಂದಿಸಿದರು.




