Kalaburagi | ಧರ್ಮಸ್ಥಳ ಗ್ರಾಮಾಭಿವೃದ್ಧಿಯ ನೂತನ ಯೋಜನಾಧಿಕಾರಿಗಳಿಗೆ ಅಭಿನಂದನೆ

ಕಲಬುರಗಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಮಲಾಪುರದ ನೂತನ ಯೋಜನಾಧಿಕಾರಿ ರಜಬ್ ಅಲಿ ಹಾಗೂ ಕಲಬುರಗಿ ಯೋಜನಾಧಿಕಾರಿ ಸಂಗಪ್ಪ ಸಂಗಳದ ಅವರಿಗೆ ಸ್ವಾಗತ ಕೋರಿ ಅಭಿನಂದನೆ ಸಲ್ಲಿಸಲಾಯಿತು.
ನಗರದ ಆಮಂತ್ರಣ ಹೋಟೆಲ್ ಸಭಾಂಗಣದಲ್ಲಿ ಮೇ 12ರಂದು ನಡೆದ ಸರಳ ಸಮಾರಂಭದಲ್ಲಿ ಖ್ಯಾತ ಉದ್ಯಮಿಗಳು ಹಾಗೂ ಅನಂತ ಹೋಟೆಲ್ ಪಾಲುದಾರರಾದ ಮಹಾದೇವ ಗುತ್ತೇದಾರ್, ವೆಂಕಟೇಶ್ ಕಡೇಚೂರ್, ಯಾದಗಿರಿಯ ಪಿಎಸ್ಐ ವಿಠ್ಠಲ್ ನರೋಣ, ಜನಜಾಗೃತಿ ವೇದಿಕೆಯ ಕೋಶಾಧಿಕಾರಿ ಡಾ. ಸದಾನಂದ ಪೆರ್ಲ ಸೇರಿದಂತೆ ಹಲವರು ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾದೇವ ಗುತ್ತೇದಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಗೆ ಪೂರಕವಾದ ಸಂಸ್ಥೆಯಾಗಿದ್ದು, ತಾಲೂಕು ಮಟ್ಟದಲ್ಲಿ ಕೆರೆ ಅಭಿವೃದ್ಧಿ ಸೇರಿದಂತೆ ಹಲವು ಉತ್ತಮ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯೋಜನೆಯ ಕಲಬುರಗಿ ಜಿಲ್ಲಾ ನಿರ್ದೇಶಕರಾದ ಗಣಪತಿ ಮಾಳಂಜಿ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಾರಂಭದಲ್ಲಿ ಉದ್ಯಮಿ ರಾಜೇಶ್ ದತ್ತು ಗುತ್ತೇದಾರ್, ಯೋಜನೆಯ ಜಿಲ್ಲಾ ಎಂ ಐ ಎಸ್ ಯೋಜನಾಧಿಕಾರಿ ಮಹಾಂತೇಶ ಕುಟಗಿ ಉಪಸ್ಥಿತರಿದ್ದರು.






