ಕಲಬುರಗಿ | ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶ್ರಿದೇವಿ ಅವರಿಗೆ ಅಭಿನಂದನಾ ಸಮಾರಂಭ

ಕಲಬುರಗಿ: ಪ್ರತಿಷ್ಠಿತ ಶರಣಬಸವ ವಿಶ್ವವಿದ್ಯಾಲಯದ ಗಣಿತಶಾಸ್ತ್ರದ ಪ್ರಾಧ್ಯಾಪಕಿ ಡಾ.ಶ್ರೀದೇವಿ ಕಲ್ಯಾಣ ಅವರು ಭಾರತ ಸರ್ಕಾರದಿಂದ ಕೊಡಮಾಡುವ ಪ್ರಸಕ್ತ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿನ್ನೆಲೆ ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸತ್ಕರಿಸಿ ಗೌರವಿಸಲಾಯಿತು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಶರಣರ ನಾಡಿನ ಶಿಕ್ಷಕ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಅರಳಿರುವುದು ನಾಡಿಗೆ ಸಂತಸ ತಂದಿದೆ. ಈ ಭಾಗದಲ್ಲಿ ವಿಶ್ವವಿದ್ಯಾಲಯದಲ್ಲಿ ಕ್ರಿಯಾಶೀಲ ಬೋಧನೆ ಮಾಡಿ ಅನೇಕ ವಿಚಾರಗಳು ಕುರಿತು ಸಂಶೋಧನೆ ಕೈಗೊಂಡು ಇಂದು ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಅದರ ಮೌಲ್ಯ ಹೆಚ್ಚಿಸಿದಂತಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ವಿಜೇತೆ ಡಾ ಶ್ರೀದೇವಿ ಕಲ್ಯಾಣ ಅವರು ಮಾತನಾಡಿದದರು.
ಕಸಾಪ ದ ಕೇಂದ್ರ ಸಮಿತಿಯ ಪ್ರತಿನಿಧಿ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಜಿಲ್ಲಾ ಕಸಾಪ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ, ಸಹ ಕಾರ್ಯದರ್ಶಿ ರಾಜೇಂದ್ರ ಮಾಡಬೂಳ, ಪ್ರಮುಖರಾದ ಡಾ. ರೆಹಮಾನ್ ಪಟೇಲ್, ಶಿವಲೀಲಾ ಕಲಗುರ್ಕಿ, ಕುಪೇಂದ್ರ ಬರಗಾಲಿ, ದಿನೇಶ ಮದಕರಿ, ಪ್ರಭವ ಪಟ್ಟಣಕರ್, ಎಂ.ಎನ್. ಸುಗಂಧಿ, ನಾಗಪ್ಪ ಸಜ್ಜನ್, ಶಿವಾನಂದ ಪೂಜಾರಿ, ರೇವಣಸಿದ್ಧ ಗುಂಡಗುರ್ತಿ, ಮಲ್ಲಿನಾಥ ಸಂಗಶೆಟ್ಟಿ, ವಿಶಾಲಾಕ್ಷಿ ಮಾಯಣ್ಣವರ್ವ, ಈರಣ್ಣಾ ಸೋನಾರ, ಲಲಿತಾ ಪಾಟೀಲ, ಮಲ್ಲಿಕಾರ್ಜುನ ಇಬ್ರಾಹಿಂಪುರ ಸೇರಿದಂತೆರ ಅನೇಕರು ಭಾಗವಹಿಸಿದ್ದರು.







