ಕಲಬುರಗಿ| ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರ ಗೆಲುವು

ಕಲಬುರಗಿ: ಜೇವರ್ಗಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‍ನ ಆಡಳಿತ ಮಂಡಳಿಗೆ ಆ.17 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬಹುಮತ ಪಡೆದುಕೊಂಡಿದ್ದಾರೆ.
ಜೇವರ್ಗಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‍ನ 13 ಸದಸ್ಯರ ಆಡಳಿತ ಮಂಡಳಿಗೆ ಮೂರು ಪಕ್ಷದ ಮುಖಂಡರು ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಂಡು ಬರಲು ಬಹಳ ಜಿದ್ದಾಜಿದ್ದಿನಿಂದ ಚುನಾವಣೆ ನಡೆಸಿದ್ದು, ಕೊನೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬಹುಮತ ಪಡೆದುಕೊಂಡಿದ್ದಾರೆ.
40 ವರ್ಷಗಳ ನಂತರ ನಡೆದ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‍ನ ಆಡಳಿತ ಮಂಡಳಿ 13ಸದಸ್ಯರ ಚುನಾವಣೆಯನ್ನು ನೋಡಿ ತಾಲೂಕಿನ ಜನತೆಗೆ ಅಚ್ಚರಿ ಮೂಡಿಸಿದೆ. ಇಲ್ಲಿಯವರೆಗೂ ಈ ಚುನಾವಣೆ ಈ ರೀತಿಯಾಗಿ ನಡೆಯುತ್ತೆ ಅನ್ನುವುದೆ ಜನತೆಗೆ ಗೊತ್ತಿರಲಿಲ್ಲ. ಆದರೆ ಈ ಸಲ ನಡೆದ ಚುನಾವಣೆ ನೋಡಿ ರಾಜಕೀಯ ಮುಖಂಡರು ಹಾಗೂ ಕಾರ್ಯಕರ್ತರು ಅಚ್ಚರಿ ಆಗಿದೆ ಅನ್ನುವುದು ಸುಳ್ಳಲ್ಲ.
ಹರವಾಳ - ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಶರಣಗೌಡ ತಂದೆ ಅಣ್ಣಾರಾಯಗೌಡ, ಬಿಳವಾರ- ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಇಂದಿರಾ ಗಂಡ ಚನ್ನಪ್ಪಗೌಡ ಬಿರಾದಾರ, ಜೇವರ್ಗಿ- ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಶರಣಗೌಡ ತಂದೆ ಸಿದ್ರಾಮಪ್ಪಗೌಡ, ನೆಲೋಗಿ- ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಬಸವಲಿಂಗಪ್ಪ ತಂದೆ ಮಹಾದೇವಪ್ಪ, ಆಂದೋಲ- ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸಿದ್ದಣ್ಣ ತಂದೆ ನಾನಾಗೌಡ ಸುಂಟ್ಯಾಣ, ವಡಗೇರಾ- ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಚಂದ್ರಶೇಖರ ತಂದೆ ಶರಣಪ್ಪ ಅವರಾದ, ಮಳ್ಳಿ- ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸಾಂಬಶಿವ ತಂದೆ ಮಲ್ಲಯ್ಯ ಹಿರೇಮಠ, ಅರಳಗುಂಡಗಿ- ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದಿಂದನಂದಮ್ಮ ಗಂಡ ಬಸವರಾಜ ಕಾಚಾಪೂರ, ಕೋಳಕೂರ- ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದಿಂದ ಅಮೀನಾಬೇಗಂ ಗಂಡ ಹಾಜಿ ಮಲಂಗ, ಯಡ್ರಾಮಿ - ಸಾಲಗಾರರ ಹಿಂದುಳಿದ ವರ್ಗ (ಅ) ಕ್ಷೇತ್ರದಿಂದ ಬಾಬುಗೌಡ ತಂದೆ ಸಿದ್ದನಗೌಡ ಮಾಲಿ ಪಾಟೀಲ ಸುಂಬಡ, ಜೇರಟಗಿ - ಸಾಲಗಾರರ ಹಿಂದುಳಿದ ವರ್ಗ(ಬ) ಕ್ಷೇತ್ರದಿಂದ ಅಮೃತ ತಂದೆ ಬಾಪುರಾಯ ಮಯೂರ, ಇಜೇರಿ- ಸಾಲಗಾರರ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಲಕ್ಷ್ಮೀ ಗಂಡ ಈರಣ್ಣ ಅವರಾದ, ಬಿನ್- ಸಾಲ ಪಡೆಯಲಾರದ ಕ್ಷೇತ್ರದಿಂದಬಸವರಾಜ ತಂದೆ ಶಿವಲಿಂಗಪ್ಪ ಹೂಗಾರ, ಪ್ರತಾಪ ತಂದೆ ಚಿದಾನಂದ ಕಟ್ಟಿ ಅವಿರೋಧ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿನಿಂದ ಕಾಂಗ್ರೆಸ್ ಕಾರ್ಯಕತ್ರರು ಸಂಭ್ರಮ ಪಟ್ಟರು. ರುಕುಂ ಪಟೇಲ್, ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ಖಾಸಿಂ ಪಟೇಲ್, ಮುನ್ನಾ ಪಟೇಲ್, ಮರೆಪ್ಪ ಸರಡಗಿ, ರಂಜಿತ ಸೇರಿದಂತೆ ನೂರಾರೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪಿಕಾರ್ಡ್ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ 6 ಜನ ಅಭ್ಯರ್ಥಿಗಳು ಜಯಗಳಿಸಿದ್ದು, ಒಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ. ಸರಕಾರದಿಂದ ಒಬ್ಬ ಸದಸ್ಯನ್ನು ನಾಮನಿರ್ದೇಶನ ಮಾಡಲಾಗುವುದು. ಇದರಿಂದ ನಮ್ಮ ಬೆಂಬಲಿತ ಸಂಖ್ಯೆ 8 ಆಗಲಿದ್ದು, ಅಧ್ಯಕ್ಷ-ಉಪಾಧ್ಯಕ್ಷ ನಮ್ಮ ಪಕ್ಷದವರೆ ಆಗುತ್ತಾರೆ.
-ಡಾ. ಅಜಯಸಿಂಗ್ (ಶಾಸಕ ಜೇವರ್ಗಿ).







