Kalaburagi | ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಾಲಕಿಯರ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತಿಯನ್ನು ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಪ್ರಾಚಾರ್ಯ ಡಾ.ಮಹೇಶ ಗಂವ್ಹಾರ ಅವರು, ಅಂಬೇಡ್ಕರ್ ಅವರು ಈ ದೇಶದ ದೀನ ದಲಿತರು, ಹಿಂದುಳಿದವರ ಧ್ವನಿಯಾಗಿ ಅವರಿಗೆ ಬೇಕಾದ ಹಕ್ಕುಗಳನ್ನು ಕಲ್ಪಿಸಿಕೊಟ್ಟ ಮಹನಿಯರು ಹಾಗಾಗಿ ಇಂದಿಗೂ ಅವರು ನಮಗೆ ಸ್ಮರಣಿಯರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ವಿಜಯಲಕ್ಷ್ಮಿ ಪಾಕಿನ್,ರಾಜಶ್ರೀ ಹಾಗೂ ಸಿಬ್ಬಂದಿ ವರ್ಗದ ಅನಸುಯಾ ಗಾದಾ, ಶಿಲ್ಪಕಲಾ ಗೋಲಗೇರಿ, ಬಸವರಾಜ, ಶಾರಾದ, ಉಪಸ್ಥಿತರಿದ್ದರು.
Next Story




