ಕಲಬುರಗಿ | ಸಾಲಬಾಧೆ ತಾಳಲಾರದೆ ಭೀಮಾ ನದಿಗೆ ಹಾರಿ ರೈತ ಆತ್ಮಹತ್ಯೆ

ಕಲಬುರಗಿ: ಪ್ರವಾಹದಿಂದ ತನ್ನ ಜಮೀನಿನಲ್ಲಿ ಬೆಳೆದಿರುವ ಬೆಳೆ ನೀರುಪಾಲಾಗಿರುವುದನ್ನು ಕಂಡು ಸಾಲಬಾಧೆಯಿಂದ ರೈತನೋರ್ವ ಭೀಮಾ ನದಿಯ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ತಾಲೂಕಿನ ಬಸವಪಟ್ಪಣ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಕಲಬುರಗಿ ತಾಲೂಕಿನ ಬಸವಪಟ್ಟಣ ಗ್ರಾಮದ ಮರೆಪ್ಪ ಸಾಯಬಣ್ಣಾ ಬರ್ಮಾ (42) ಮೃತ ರೈತ ಎಂದು ತಿಳಿದುಬಂದಿದೆ.
ಸಾಯಬಣ್ಣಾ ಬರ್ಮಾ ಅವರು 2 ಎಕರೆಯಷ್ಟು ಹೊಲದ ಮೇಲೆ ಫರತಾಬಾದ್‌ನ ಬ್ಯಾಂಕ್ ಆಫ್ ಬರೋಡಾದಲ್ಲಿ 2.5 ಲಕ್ಷ ರೂ. ಹಾಗೂ ಹೊರಗಡೆ ಕೈಸಾಲ 10 ಲಕ್ಷ ರೂ. ಪಡೆದು ವ್ಯವಸಾಯ ಮಾಡಿದ್ದರು. ಆದರೆ ತಾನು ಬೆಳೆದ ಬೆಳೆ ಕೈಗೆ ಬರಲಿಲ್ಲ ಎಂದು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
Next Story





