ಕಲಬುರಗಿ | ಸಾಂಸ್ಕೃತಿಕ ಕಾರ್ಯಕ್ರಮ : ಡಾ.ಸನಾ ಫರಹೀನ್ ಶೇಕ್ ಗೆ ಸನ್ಮಾನ

ಕಲಬುರಗಿ : ತಾಜ್ ನಗರ ಮುಸ್ಲಿಂ ಕಾಲೋನಿ, ಮುಸ್ಲಿಂ ಸಂಘದ ತಾಜ್ ಶಾಲಾ ಮೈದಾನದಲ್ಲಿ ರಜಾ ಕೋಚಿಂಗ್ ಇನ್ಸ್ಟಿಟ್ಯೂಟ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಆಳಂದ ತಾಲ್ಲೂಕಿನಿಂದ ಬರುವ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ (ಶಲ್ಯ ತಂತ್ರ) ಪರೀಕ್ಷೆಯಲ್ಲಿ ಎರಡನೇ ರ‍್ಯಾಂಕ್ ಪಡೆದ ಡಾ.ಸನಾ ಫರಹೀನ್ ಶೇಕ್ ಅವರಿಗೆ ಸನ್ಮಾನಿಸಲಾಯಿತು.
ಈ ವೇಳೆ ಡಾ.ಸನಾ ಫರಹೀನ್ ಶೇಖ್ ಮಾತನಾಡಿ, ಧೈರ್ಯ ಹಾಗೂ ಪರಿಶ್ರಮದಿಂದ ಅಧ್ಯಯನ ಮುಂದುವರೆಸಬೇಕೆಂದು ಸಲಹೆ ನೀಡಿದರು.
ಎಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ಟಾಪರ್ ಗಳು ಹಾಗೂ ಸಮರ್ ಕ್ಲಾಸಿನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳು ಮತ್ತು ಪದಕಗಳನ್ನು ವಿತರಿಸಲಾಯಿತು.
ಆರು ವಿಭಿನ್ನ ಶಾಲೆಗಳ ಆಯ್ದ ವಿದ್ಯಾರ್ಥಿಗಳಿಗೆ ಸ್ಮರಣಿಕೆಗಳನ್ನು (ಮೆಮೆಂಟೋ) ನೀಡಲಾಯಿತು. ವಿಶೇಷವಾಗಿ ಆ ಮಕ್ಕಳ ಪೋಷಕರಿಗೆ ಪುಷ್ಪಮಾಲೆಯಿಂದ ಗೌರವ ಸಲ್ಲಿಸಲಾಯಿತು. ಹಾಲಿ ಮತ್ತು ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಶಾಲು, ಪುಷ್ಪಗುಚ್ಛ ಹಾಗೂ ಸ್ಮರಣಿಕೆಗಳನ್ನು ನೀಡಿ ಅವರ ಸೇವೆಗೆ ಕೃತಜ್ಞತೆ ಗೌರವ ಸಲ್ಲಿಸಲಾಯಿತು.
ಈ ಕಾರ್ಯಕ್ರಮವನ್ನು ತಾಜ್ ಉರ್ದು ಹೈ ಸ್ಕೂಲ್‍ನ ಮುಖ್ಯೋಪಾಧ್ಯಾಯರು ಮಧುಮತಿ ನಾದಿರಾ ಬೇಗಮ್, ರಜಾ ಕೋಚಿಂಗ್ ಇನ್ಸ್ಟಿಟ್ಯೂಟ್, ಕಳೆದ ಮೂರು ವರ್ಷಗಳಿಂದ ತಾಜ್ ನಗರ ಮುಸ್ಲಿಂ ಕಾಲೋನಿ, ಮುಸ್ಲಿಂ ಸಂಗ್ನಲ್ಲಿ ವಿದ್ಯಾ ಸೇವೆ ಸಲ್ಲಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಪೋಷಕರಿಗೆ ಪ್ರೋತ್ಸಾಹ ಹಾಗೂ ಶಿಕ್ಷಣ ಜಾಗೃತಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ.
ಇನ್ಸ್ಟಿಟ್ಯೂಟ್‍ನ ಅಧ್ಯಕ್ಷರಾದ ಸಯ್ಯದ್ ನಯಿಮುದ್ದೀನ್ ಅವರು ಎಲ್ಲ ಅತಿಥಿಗಳು, ಪೋಷಕರು, ಶಿಕ್ಷಕರು ಮತ್ತು ಪಾಲ್ಗೊಂಡ ಎಲ್ಲಾ ವ್ಯಕ್ತಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಮೀನ್ ಪಟೇಲ್ (ನ್ಯಾಷನಲ್ ಸ್ಕೂಲ್), ನಸೀರ್ ಮಣಿಯಾಲ್ (ಶೇಖ್ ರೋಜಾ ಸರ್ಕಾರಿ ಶಾಲೆ), ಜಾಕಿಯಾ ಪ್ರವೀನ್ (ಬಿ.ಬಿ. ರಜಾ ಗಲ್ರ್ಸ್ ಹೈ ಸ್ಕೂಲ್), ಅಬ್ದುರ್ರಹ್ಮಾನ್ ಸಾಹೇಬ್ ಮತ್ತು ಶಂಷುದ್ದೀನ್ ಸಾಹೇಬ್ ಉಪಸ್ಥಿತರಿದ್ದರು. ಹಲವಾರು ಶಾಲೆಗಳ ಶಿಕ್ಷಕರು, ಪೋಷಕರು, ಪಾಲಕರು ಮತ್ತು ಪ್ರದೇಶದ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.







