ಕಲಬುರಗಿ | ಗಣೇಶ ಉತ್ಸವ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ : ಬಹುಮಾನ ವಿತರಣೆ

ಕಲಬುರಗಿ: ನಗರದ ಹೈಕೋರ್ಟ್ ಎದುರುಗಡೆ ಇರುವ ಅಕ್ಕಮಹಾದೇವಿ ಕಾಲೋನಿ ಅಭಿವೃದ್ಧಿ ಸಂಘ (ರಿ) ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಏರ್ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗಣೇಶ ಚತುರ್ಥಿ ಸಂಪನ್ನ ಸಾಮಗ್ರಿಗಳು ಹರಾಜು ಕಾರ್ಯಕ್ರಮಗಳು ನಡೆದವು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ವಿಜಯಶಾಲಿಗಳನ್ನು ಬಹುಮಾನ ವಿತರಣೆ ಮಾಡಿ ಗೌರವಿಸಲಾಯಿತು. ಝೀ ಕನ್ನಡ ಸರಿಗಮಪ ವಿಜೇತರಾದ ಶಿವಾನಿ ಸ್ವಾಮಿ ಅವರಿಂದ ಸಂಗೀತ ರಸಮಂಜರಿ ಜರುಗಿತು.
ಈ ಸಂದರ್ಭದಲ್ಲಿ ಗಣೇಶ ಉತ್ಸವ ಸಮಿತಿಯ ಸದಸ್ಯರಾದ ಶ್ರೀಕಾಂತ ನಿರೋಣಿ CA, ಸುಶೀಲಕುಮಾರ ಮಾಮಡಿ, ಪ್ರಭುಲಿಂಗ ಗೊಬ್ಬೂರ, ದಿನೇಶ ಠಾಕೂರ, ಶಾಂತಕುಮಾರ ನಂದೂರ, ಶಂಕ್ರೆಪ್ಪ ಹತ್ತಿ, ಕಾಶಿನಾಥ ಗಾಯಕವಾಡ, ಆನಂದ ಹಿರೇಮಠ, ವಿಶ್ವನಾಥ ಸಾಲಿಮಠ, ವಿಠ್ಠಲ್ ಮೋರೆ, ಬಿ.ಎಂ. ಪಾಟೀಲ, ಮೋನಪ್ಪ ಅನ್ವರ, ಪ್ರಕಾಶ ಯಂಕಂಚಿ, ಸಂತೋಷ ಕುಲಕರ್ಣಿ, ಸಿದ್ಧಣ್ಣ ಸಜ್ಜನ, ಬಸವರಾಜ ಝಾಪೂರ, ರಾಜಕುಮಾರ ಕಡಗಂಚಿ, ಭಗವಾನ ಚಾಕೂರೆ, ಉಮೇಶ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.
Next Story





