ಕಲಬುರಗಿ | ಅ.18 ರಂದು ಗ್ರಾಹಕರ ಸಂಪರ್ಕ ಸಭೆ

ಕಲಬುರಗಿ: ಗ್ರಾಹಕರೊಡನೆ ಉತ್ತಮ ಭಾಂದವ್ಯ ಬೆಸೆಯುವ ನಿಟ್ಟಿನಲ್ಲಿ ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಕಲಬುರಗಿ ಎಲ್ಲಾ ಜೆಸ್ಕಾಂ ನಗರ ಉಪ ವಿಭಾಗಗಳ ವ್ಯಾಪ್ತಿಗೆ ಬರುವ ಗ್ರಾಹಕರಿಗಾಗಿ ಅ.18 ರಂದು ಗ್ರಾಹಕರ ಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಕಲಬುರಗಿ ಜೆಸ್ಕಾಂ ನಗರ ಉಪವಿಭಾಗ-1ಕ್ಕೆ ಸಂಬಂಧಿಸಿದಂತೆ ಅಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರಗೆ ಕಲಬುರಗಿ ಸೂಪರ್ ಮಾರ್ಕೇಟಿನ ನಗರ ಉಪ ವಿಭಾಗ-1ರ ಕಾರ್ಯ ಮತ್ತು ಪಾಲನೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಕಚೇರಿಯಲ್ಲಿ ಹಾಗೂ ಕಲಬುರಗಿ ಜೆಸ್ಕಾಂ ನಗರ ಉಪ ವಿಭಾಗ-2ಕ್ಕೆ ಸಂಬಂಧಿಸಿದಂತೆ ಅಂದು ಮಧ್ಯಾಹ್ನ 3 ರಿಂದ ಸಂಜೆ 5.30 ಗಂಟೆಗೆ ನಗರ ಉಪ ವಿಭಾಗ-2ರ ಕಾರ್ಯ ಮತ್ತು ಪಾಲನೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಕಚೇರಿಯಲ್ಲಿ ನಡೆಯಲಿದೆ.
ಕಲಬುರಗಿ ಜೆಸ್ಕಾಂ ನಗರ ಉಪ ವಿಭಾಗ-3ಕ್ಕೆ ಸಂಬಂಧಿಸಿದಂತೆ ಅಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರಗೆ ನಗರ ಉಪ ವಿಭಾಗ-3ರ ಕಾರ್ಯ ಮತ್ತು ಪಾಲನೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಕಚೇರಿಯಲ್ಲಿ ಹಾಗೂ ಕಲಬುರಗಿ ನಗರ ಉಪ ವಿಭಾಗ-4ಕ್ಕೆ ಸಂಬಂಧಿಸಿದಂತೆ ಅಂದು ಮಧ್ಯಾಹ್ನ 3 ರಿಂದ ಸಂಜೆ 5.30 ಗಂಟೆಯವರೆಗೆ ನಗರ ಉಪ ವಿಭಾಗ-4ರ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಕಚೇರಿಯಲ್ಲಿ ಜರುಗಲಿದೆ.
ಈ ಗ್ರಾಹಕರ ಸಂಪರ್ಕ ಸಭೆಯಲ್ಲಿ ಗ್ರಾಹಕರು ತಮ್ಮ ಯಾವುದೇ ತರಹದ ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಸಲ್ಲಿಸಬಹುದಾಗಿದೆ. ಮೇಲ್ಕಂಡ ದಿನದಂದು ನಡೆಯುವ ಈ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ವಿದ್ಯುತ್‍ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಎಂದು ಅವರು ತಿಳಿಸಿದ್ದಾರೆ.







