ಕಲಬುರಗಿ | ಹಾಗರಗಾ ವಸತಿ ಯೋಜನೆಯ ನಿವೇಶನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

ಮಝಹರ್ ಆಲಂ ಖಾನ್
ಕಲಬುರಗಿ: ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಾಗರಗಾ ಗ್ರಾಮದಲ್ಲಿ ರೈತರ ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಿದ 50:50 ವಸತಿ ಯೋಜನೆಯಡಿ ವಿವಿಧ ಅಳತೆಯ ನಿವೇಶನಗಳ ಹಂಚಿಕೆಗೆ ಸಾರ್ವಜನಿಕರು ಪ್ರಾಧಿಕಾರದಿಂದ ಪಡೆಯುವ ಅರ್ಜಿಯನ್ನು ಜು.22ರ ವರೆಗೆ ಮತ್ತು ಭರ್ತಿ ಮಾಡಿದ ಅರ್ಜಿಯನ್ನು ಜು. 25ರ ವರೆಗೆ ಸಲ್ಲಿಕೆಗೆ ದಿನಾಂಕ ವಿಸ್ತರಿಸಲಾಗಿದೆ.
ಈ ಹಿಂದೆ ನಿವೇಶನಗಳಿಗೆ ಪ್ರಾಧಿಕಾರದಿಂದ ಸಾರ್ವಜನಿಕರಿಗೆ ಅರ್ಜಿ ವಿತರಿಸುವ ದಿನಾಂಕ ಜು.19 ಮತ್ತು ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸುವ ಕೊನೆಯ ಜು.22 ಎಂದು ತಿಳಿಸಲಾಗಿತ್ತು. ಇದೀಗ ನಿವೇಶನಗಳ ಹಂಚಿಕೆ ದಿನಾಂಕವನ್ನು ವಿಸ್ತರಿಸಲು ಸಾರ್ವಜನಿಕರು ಕೋರಿರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಅರ್ಜಿಗಳನ್ನು ಸರ್ವಜನಿಕರಿಗೆ ವಿತರಿಸುವ ಕೊನೆಯ ದಿನಾಂಕ ಜು.22ರ ಸಾಯಂಕಾಲ 5.30 ಗಂಟೆ ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸುವ ಕೊನೆಯ ದಿನಾಂಕವನ್ನು ಜು.25ರ ಸಾಯಂಕಾಲ 5.30 ರವರೆಗೆ ಅವಧಿ ವಿಸ್ತರಿಸಲಾಗಿದೆ.
ಸಾರ್ವಜನಿಕರು ಅವಧಿ ವಿಸ್ತರಣೆಯು ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಾಧಿಕಾರದ ಅಧ್ಯಕ್ಷ ಮಝಹರ್ ಆಲಂ ಖಾನ್ ಮತ್ತು ಆಯುಕ್ತ ಜಿ.ಎಸ್.ಮಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





