ಕಲಬುರಗಿ | ಬೆಳೆಹಾನಿಯಾದಲ್ಲಿ ವಿಮೆ ಕಂಪನಿಗೆ ದೂರು ನೀಡಲು ರೈತರಿಗೆ ಡಿಸಿ ಸೂಚನೆ

ಕಲಬುರಗಿ: ಪ್ರಸ್ತುತ ಸಾಲಿನಲ್ಲಿ ಆಗಸ್ಟ್ ಎರಡನೇ ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೆಸರು, ಉದ್ದು, ಸೋಯಾ ಅವರೆ ಮತ್ತು ತೊಗರಿ ಬೆಳೆಗಳು ಹಾನಿಯಾಗುವ ಸಂಭವವಿದ್ದು, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಬೆಳೆವಿಮೆ ಮಾಡಿಸಿ ಬೆಳೆಹಾನಿಯಾದ ಕಲಬುರಗಿ ಜಿಲ್ಲೆಯ ಎಲ್ಲಾ ರೈತರು ಸ್ಥಳೀಯ ಪ್ರಕೃತಿ ವಿಕೋಪದಡಿ ಮಳೆಬಂದ 72 ಗಂಟೆಗಳಲ್ಲಿ (Localized calamity) ಇಫ್ಕೋ ಟೋಕಿಯೋ ಜನರಲ್ ಇನ್ಸುರೆನ್ಸ್ ಕಂಪನಿಯ ಟೋಲ್ ಫ್ರೀ ನಂಬರ್ 1800-200-5142 ಗೆ ಕರೆ ಮಾಡಿ ದೂರು ನೀಡಲು ಅಥವಾ ಟೋಲ್ ಪ್ರೀ ನಂಬರ್‍ಗೆ ದೂರು ನೀಡಲು ತಾಂತ್ರಿಕ ಸಮಸ್ಯೆಯಾದ್ದಲ್ಲಿ ರೈತರು ತಾಲ್ಲೂಕಿನ ಈ ಕೆಳಕಂಡ ಸಹಾಯಕ ನಿರ್ದೇಶಕರ ಕಚೇರಿಯಲ್ಲಿನ ಇಫ್ಕೋ ಟೋಕಿಯೊ ಪ್ರತಿನಿಧಿಗೆ ಸೂಕ್ತ ದಾಖಲಾತಿಗಳೊಂದಿಗೆ ಲಿಖಿತವಾಗಿ ದೂರು ಸಲ್ಲಿಸಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗಳಾದ ಬಿ.ಫೌಝಿಯಾ ತರನ್ನುಮ್ ಅವರು ತಿಳಿಸಿದ್ದಾರೆ.
ಇಫ್ಕೋ ಟೋಕಿಯೋ ಜಿಲ್ಲಾ ಪ್ರತಿನಿಧಿ ಶಿವ ಎಸ್.ಬಿ. ಮೊಬೈಲ್ ಸಂಖ್ಯೆ 6362954334, ಆಳಂದ-ಸುನೀಲ ಮನು ಪವಾರ್ 9845848208, ಯಡ್ರಾಮಿ-ಭೀಮಪ್ಪ ಎಂ. ಬಳಬಟ್ಟಿ 9844588639, ಅಫಜಲಪೂರ-ಗಣಪತಿ ಹೊನ್ನಳ್ಳಿ 8217050978, ಕಮಲಾಪೂರ-ಸಂತೋಷ ರಾಗಿ 9972320999, ಚಿತ್ತಾಪೂರ-ರಾಹುಲ್ ಪಾಟೀಲ್ 7619317156, ಕಲಬುರಗಿ-ಸೋಮಲಿಂಗಯ್ಯ ಶರಣಯ್ಯ ಹಿರೇಮಠ 9740107575, ಚಿಂಚೋಳಿ-ಕಿಶನ್ ನಾಯಕ್ 8747025295, ಸೇಡಂ-ಆಕಾಶ್ ರೆಡ್ಡಿ 7022767246, ಜೇವರ್ಗಿ-ಮಲ್ಲಿಂಗರಾಯ 7760545692, ಕಾಳಗಿ-ಚಾಂದ್ ಪಟೇಲ್ 8095384057 ಹಾಗೂ ಶಹಾಬಾದ-ಗುಂಡೇರಾವ್ 7338574943.
2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ತೊಗರಿ, ಹೆಸರು, ಉದ್ದು, ಸೋಯಾಬೀನ್ ಹತ್ತಿ ಹಾಗೂ ಇತರೆ ಬೆಳೆಗಳಿಗೆ ಒಟ್ಟು 301009 ರೈತರು 361590.49 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ವಿಮೆ ನೋಂದಣಿ ಮಾಡಿಸಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.







