ಕಲಬುರಗಿ | 200 ಮೀಟರ್ ಎತ್ತರದ ಅಂಬೇಡ್ಕರ್ ಅವರ ಮೂರ್ತಿ ಅನಾವರಣಕ್ಕೆ ಆಗ್ರಹ
944 ಕಿ.ಮೀ ಭೀಮ ಜಾಥಾ

ಕಲಬುರಗಿ : ರಾಜ್ಯದ ರಾಜಧಾನಿ ಬೇಂಗಳೂರಿನಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 200 ಮೀಟರ್ ಎತ್ತರದ ಪುತ್ಥಳಿ ಅನಾವರಣ ಸೇರಿದಂತೆ ಅನೇಕ ಬೇಡಿಕೆಗಳು ಈಡೇರುವರೆಗೂ ಹೋರಾಟ ನಿಲ್ಲದು ಎಂದು ಭಿಮ್ ಪ್ರಜಾ ಸಂಘ ದ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ವೈಟ್ ಪೀಲ್ಡ್ ಮುರಗೇಶ್ ರವರು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಜೇವರ್ಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ 8 ನೇ ದಿನದ ಕಾಲ್ನಡಿಗೆ ಜಾತಕ್ಕೆ ತಾಲೂಕಿನ ಮುಖಂಡರುಗಳು ಚಾಲನೆ ನೀಡಿ ವೈಟ್ ಪೀಲ್ಡ್ ಮುರಗೇಶ್ ಮಾತನಾಡಿದರು.
ರಾಜ್ಯ ರಾಜಧಾನಿ ಬೇಂಗಳೂರಿನಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 200 ಮೀಟರ್ ಎತ್ತರದ ಪುತ್ಥಳಿಯನ್ನು ನಿರ್ಮಾಣ ಮಾಡಬೇಕು. ಕರ್ನಾಟಕ ಸರಕಾರದ ಲಾಂಛನದಲ್ಲಿ ಸತ್ಯಮೇವ ಜಯತೇ ಹಿಂದಿ ಪದ ಹೋಲಿಕೆಯಂತೆ ಸಂಸ್ಕೃತ ಪದದಲ್ಲಿದ್ದದನ್ನು ಕನ್ನಡ ಪದಕ್ಕೆ ಬದಲಾವಣೆ ಮಾಡಬೇಕು. ಪ್ರತಿ ಜಿಲ್ಲೆಗೆ ಒಂದು ಡಾ.ಬಿ.ಆರ್.ಅಂಬೇಡ್ಕರ್ ರವರ ಗ್ರಂಥಾಲಯ ನಿರ್ಮಾಣ ಮಾಡಬೇಕು ಹಾಗೂ ಅಲ್ಲಿ ಐಎಎಸ್ ಮತ್ತು ಕೆಎಎಸ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎ ಜಿ ಕೃಷ್ಣಮೂರ್ತಿ, ನಾಗರಾಜ, ಮುನಿರಾಜ, ರಾಕೇಶ, ಗಜ, ತಾಲೂಕಿನ ಮುಖಂಡರಾದ ಮಲ್ಲಣ್ಣ ಕೊಡಚಿ, ಭೀಮರಾಯ ನಾಗನೂರ, ರಾಜಶೇಖರ ಶಿಲ್ಪಿ, ವಿಶ್ವರಾಧ್ಯ ಗಂವ್ಹಾರ, ಸಿದ್ದಪ್ಪ ಅಲೂರ, ರವಿ ಕುಳಗೇರಿ, ರಾಯಪ್ಪ ಬಾರಿಗಿಡ, ಭಾಗಣ್ಣ ಸಿದ್ನಾಳ, ಸಿದ್ದು ಕೇರೂರ, ಶ್ರೀಹರಿ ಕರಕಳ್ಳಿ, ಯಶವಂತ ಬಡಿಗೇರ, ದೊಡ್ಡಪ್ಪ ಮಲ್ಲಾ, ಶ್ರೀಮಂತ ಕಿಲೇದಾರ, ಮಹೇಶ ಕೋಕಿಲೆ, ವiಹಾಂತೇಶ ಹಾದಿಮನಿ, ಮುನ್ನ ಕಳ್ಳಿ, ಮಲ್ಲಿಕಾರ್ಜುನ ಮಾರಡಗಿ, ಪರಶುರಾಮ ನೇರಡಗಿ, ಆನಂದ ಕೊಂಬಿನ್, ದೇವಿಂದ್ರ ಬಡಿಗೇರ, ವಿಶ್ವ ಆಲೂರ, ರವಿ ಸರಕಾರ, ಆಕಾಶ ಡುಗನಕರ್, ಗೀರಿಶ ಕೊಡಚಿ, ಸೋಮು ಜಟ್ನಾಕರ್ ಸೇರಿದಂತೆ ಅನೇಕರು ಜಾತದಲ್ಲಿ ಪಾಲ್ಗೊಂಡಿದ್ದರು.