ಕಲಬುರಗಿ | ಸಿಜೆಐ ಗವಾಯಿ ಮೇಲೆ ಶೂ ಎಸೆದ ವಕೀಲ ಕಿಶೋರ್ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯ

ಕಲಬುರಗಿ: ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ರಾಕೇಶ್ ಕಿಶೋರ್ ಎಂಬ ವಕೀಲನ ಮೇಲೆ ದೇಶ ದ್ರೋಹಿ ಪ್ರಕರಣ ದಾಖಲಿಸಿ, ಮರಣದಂಡನೆ ವಿಧಿಸುವಂತೆ ಒತ್ತಾಯಿಸಿ ಬುಧವಾರ ದಲಿತ ಸೇನೆ ರಾಮವಿಲಾಸ್ ಪಾಸ್ವಾನ್ ಸಂಘಟನೆಯಿಂದ ಜಿಲ್ಲಾಧಿಕಾರಿ ಅವರಣದಲ್ಲಿ ಪ್ರತಿಭಟನೆ ನಡೆಸಿ ಡಿಸಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆಯುವ ಪ್ರಯತ್ನ ಮಾಡಲಾಗಿದ್ದು, ಆರೋಪಿಯು ಸನಾತನ ಧರ್ಮವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗಲಾಗಿದೆ ಎಂಬುದು ಅತ್ಯಂತ ಆಘಾತಕಾರಿ ಮತ್ತು ಶೋಚನೀಯ. ಹಿಂದೂ ಧರ್ಮದ ಹೆಸರು, ದೇವರ ಹೆಸರು ಹೇಳಿಕೊಂಡು ಸನಾತನ ಧರ್ಮದಿಂದ ಜಾತಿ ವ್ಯವಸ್ಥೆ ಜೀವಂತ ವಿರುದ್ಧ ಮನುವಾದಿಗಳು ಒಂದಿಲ್ಲವೊಂದು ಕುತಂತ್ರ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆದು ಅವಮಾನ ಮಾಡಿದ ರಾಕೇಶ್ ಕಿಶೋರ್ ವಕೀಲನ ಮೇಲೆ ದೇಶದ್ರೋಹ ಕೇಸು ದಾಖಲಿಸಿ ಮರಣದಂಡನೆ ವಿಧಿಸಬೇಕು ಹಾಗೂ ಅವರ ಆಸ್ತಿ ಪಾಸ್ತಿ ಮುಟ್ಟುಗೋಲು ಹಾಕಬೇಕೆಂದು ದಲಿತ ಸೇನೆ ರಾಮವಿಲಾಸ್ ಪಾಸ್ವಾನ್ ಸಂಘಟನೆ ಜಿಲ್ಲಾಧ್ಯಕ್ಷ ಶ್ರವಣಕುಮಾರ ಮೊಸಲಗೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಸೇವೆ ರಾಮವಿಲಾಸ್ ಪಾಸ್ವಾನ್ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಕೆ ಜವಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬೋಳಣಿ, ಅಲಿಬಾಬಾ ಜೈನೊದಿ, ಸುನೀಲ್, ನಿರ್ಮಾಣ ಬಂಗರಗಿ, ಬಂಡಪ್ಪಾ ಚಿಂಚೋಳಿ, ಸಂಜೀವಕುಮಾರ ಕಾಳಗಿ, ರಘುವೀರ ಚಿತ್ತಾಪೂರ, ನಿಂಗಣಾ ಜೇವರ್ಗಿ, ನಿಂಗಣ್ಣಾ ಯಡ್ರಾಮಿ, ಮೋಹನ ಚಿನ್ನಾ, ಷಣ್ಮುಖ ಹೀರಾಪೂರ, ಮಲ್ಲಿಕಾರ್ಜುನ ತಾರಫೇಲ್, ಉಮೇಶ್ ಎಸ್. ಝಳಕಿ, ಮನೋಹರ ಬೆಳಿಗೇರಿ, ಗುರುರಾಜ ಸಾಸರಗಾಂವ್, ಹಣಮಂತ ಸೇರಿದಂತೆ ಮತ್ತಿತರರು ಇದ್ದರು.







