Kalaburagi | ಧೂಳಾಗುಂಡಿಗೆ ʼಕಾಯಕಯೋಗಿ ಪ್ರಶಸ್ತಿʼ ಪ್ರದಾನ

ಕಲಬುರಗಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸುಲಿಬೆಲೆಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಹಾಗೂ ಸಂಶೋಧನ ಪರಿಷತ್ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಕಾಯಕ ಯೋಗಿ ಪ್ರಶಸ್ತಿಯನ್ನು ಕಲಬುರಗಿಯ ಸಮಾಜ ಸೇವಕ ಬಸವರಾಜ ಧೂಳಾಗುಂಡಿ ಅವರಿಗೆ ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣಕುಮಾರ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಧೂಳಾಗುಂಡಿಯವರು, ನನ್ನ ಪಾಡಿಗೆ ನಾನು ಬಸವಾದಿ ಶರಣರ ವಚನ ಸಾಹಿತ್ಯ ಪಸರಿಸುವ ಕೆಲಸದಲ್ಲಿ ತೊಡಗಿರುವುದನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿರುವುದು ನಿಜಕ್ಕೂ ಸಂತಸ ತಂದಿದೆ. ಶರಣರ ವಚನದಂತೆ ಈಗಲೂ ಹಿಟ್ಟಿನ ಗಿರಣಿ ನಡೆಸುತ್ತಿದ್ದು, ಬೇರೆಯವರ ಅಂಗಡಿಯ ಖಾತೆ ಬರೆದು ಜೀವನ ನಡೆಸುತ್ತಿದ್ದೇನೆ ಎಂದು ಭಾವುಕರಾದರು.
ಈ ವೇಳೆ ಡಾ.ಆಂಜಿನಪ್ಪ, ಹುಲಿಕಲ್ ನಟರಾಜ, ರವೀಂದ್ರ ಶಾಬಾದಿ, ಡಾ. ಶಿವರಂಜನ ಸತ್ಯಂಪೇಟೆ ಮತ್ತಿತರರಿದ್ದರು.
Next Story




