ಕಲಬುರಗಿ | ಶ್ರೀರಾಮ ಫೈನಾನ್ಸ್ ನಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ

ಕಲಬುರಗಿ : ಸಮಾಜದಲ್ಲಿ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಪ್ರೋತ್ಸಾಹ ಇಂದಿನ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಶ್ರೀರಾಮ ಫೈನಾನ್ಸ್ ಪ್ರೋತ್ಸಾಹಧನ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಸ್ಥಳೀಯ ಸಿದ್ಧಲಿಂಗ ಶಿವಾಚಾರ್ಯ ಸಂಸ್ಥಾನ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಹೇಳಿದರು.
ಆಳಂದ ಪಟ್ಟಣದ ರಜ್ವಿರೋಡ ಬಳಿಯ ಶ್ರೀರಾಮ ಫೌಂಡೇಶನ್ ಆಶ್ರಯದಲ್ಲಿ ಶ್ರೀರಾಮ ಫೈನ್ಸಾನ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರೇಡ್-2 ತಹಶೀಲ್ದಾರ್ ಬಿ.ಜಿ. ಕುದರಿ, ಆಳಂದ ಠಾಣೆಯ ಪಿಐ ಶರಣಬಸಪ್ಪ ಕೋಡ್ಲಾ, ಪತ್ರಕರ್ತ ಮಹಾದೇವ ವಡಗಾಂವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ವೇದಿಕೆಯಲ್ಲಿ ಫೌಂಡೇಶನ್ ವಿಭಾಗೀಯ ಉತ್ಪಾದನ ಮುಖ್ಯಸ್ಥ ಎಚ್.ಆರ್.ಬಸವರಾಜ, ರತ್ನಾ ಮಾಲೀಪಾಟೀಲ, ಫೌಂಡೇಶನ ಇನ್ನೂರ್ವ ವಿಭಾಗೀಯ ಮದುಕಾಂತ, ಗೋವಿಂದ ರಾಠೋಡ, ಕಲೆಕ್ಸನ್ ವ್ಯವಸ್ಥಾಪಕ ರವಿಂದ್ರ ಪಿರಂಗಿ, ಶರಣಪ್ಪ ಅಯ್ಯಾಳ, ನಾಗೇಶ, ಸಿಬ್ಬಂದಿ ಸುಭಾಷ ರೆಡ್ಡಿ ಮತ್ತು ಅಮರ ಬುಧರಪ್ಪ, ಪತ್ರಕರ್ತರಾದ ಸಂಜಯ ಪಾಟೀಲ, ವಿಎ ಆನಂದ ಪೂಜಾರಿ, ಜಗದೀಶ ಕೋರೆ ಹಾಗೂ ಪಟ್ಟಣ ಸೇರಿ ಗ್ರಾಮೀಣ ಭಾಗದ ಆಯ್ದ ಫಲಾನುಭವಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಪಾಲಕರು ಉಪಸ್ಥಿತರಿದ್ದರು.
ರಮೇಶ ಕಾವಲಗಾರ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿನಿ ಸಾಕ್ಷಿ ತಂಡದಿoದ ಪ್ರಾರ್ಥನೆ ಗೀತೆ ನಡೆಯಿತು.







