Kalaburagi | ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್‍ಪಾಸ್‍ಗಳ ವಿತರಣಾ ಕಾರ್ಯ ಪ್ರಾರಂಭ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-2 ರಿಂದ 2026-27ನೇ ಸಾಲಿಗೆ ಈಗಾಗಲೇ ಮೇ 29 ರಿಂದ ವಿದ್ಯಾರ್ಥಿ ಉಚಿತ/ ರಿಯಾಯಿತಿ ಬಸ್‍ಪಾಸ್‍ಗಳ ವಿತರಣಾ ಕಾರ್ಯ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಸೇವಾಸಿಂಧು URL-sevasindhu.karnataka.gov.in ಪೋರ್ಟಲ್ ಮೂಲಕ ಆನ್‍ಲೈನ್‍ದಲ್ಲಿ ಅರ್ಜಿ ಸಲ್ಲಿಸಿ, ಅನುಮೋದನೆ ಎಸ್.ಎಮ್.ಎಸ್. ಬಂದ ನಂತರ ಕಲಬುರಗಿ ನಗರದ ವ್ಯಾಪ್ತಿಯಲ್ಲಿ ಬರುವ ಈ ಕೆಳಕಂಡ ಘಟಕ ವ್ಯಾಪ್ತಿಯ ಕರ್ನಾಟಕ-1/ ಗ್ರಾಮ-1 ಕೌಂಟರ್‍ಗಳಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 7 ಗಂಟೆಯವರೆಗೆ ವಿದ್ಯಾರ್ಥಿಗಳು ಬಸ್‍ಪಾಸ್‍ನ ಪ್ರಿಂಟ್ ಅನ್ನು ಪಡೆದುಕೊಳ್ಳಬೇಕೆಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗ-02ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಘಟಕದ ವ್ಯಾಪ್ತಿ, ಪಾಸ್ ವಿತರಣೆ ಮಾಡಲು ಗುರುತಿಸಿದ ಅಧಿಕೃತ ಕೆ-1 ಸೆಂಟರ್ ವಿಳಾಸ, ಸಂಪರ್ಕಿಸಬೇಕಾದವರ ಮೊಬೈಲ್ ಸಂಖ್ಯೆ ಹಾಗೂ ಘಟಕ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆಯ ವಿವರ ಇಂತಿದೆ.
ಕಲಬುರಗಿ ಘಟಕ-2 : ಕೆ-1 ಸೆಂಟರ್ ಎಮ್.ವ್ಹಿ.ಎನ್. ಸೆಂಟರ್ ವಿಧಾನಸೌಧ, ಕಲಬುರಗಿ-585102 ಹಾಗೂ ಮೊಬೈಲ್ ಸಂಖ್ಯೆ ಶ್ರೀಕಾಂತ-6361792160 ಹಾಗೂ ಕೆ-1 ಸೆಂಟರ್ ಮಹಾನಗರ ಪಾಲಿಕೆ ಹಿಂದುಗಡೆ, ಪಬ್ಲಿಕ್ ಗಾರ್ಡನ್ ಹತ್ತಿರ, ಕಲಬುರಗಿ-585102 ಮತ್ತು ಮೊಬೈಲ್ ಸಂಖ್ಯೆ ವಿಶಾಲ-9036421188 ಹಾಗೂ ಘಟಕ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ-7760992114 ಇರುತ್ತದೆ.
ಕಲಬುರಗಿ ಘಟಕ-3 : ಕೆ-1 ಸೆಂಟರ್ ಪೂಜಾ ಟ್ರೇಡರ್ಸ್ ಅಂಗಡಿ ನಂ.2, ಕಂಚಬಸವೇಶ್ವರ ಮಠ, ಬಾಬಾ ರೋಜಾ ದರ್ಗಾ ರೋಡ್, ಅಪೋಲೊ ಮೆಡಿಕಲ್ ಎದುರುಗಡೆ, ಕಲಬುರಗಿ (ರಾಹುಲ-9916835646) ಹಾಗೂ ಕೆ-1 ಸೆಂಟರ್ ಕೆ.ಬಿ.ಎಸ್. ಬ್ಯಾಂಕ್ ಹತ್ತಿರ, ಪ್ರತಿಭಾ ಶಾಲೆ, ಮಾರ್ಕೆಟ್ ರಸ್ತೆ, ಕಮಲಾಪೂರ-585313 (ಸಿದ್ದು-6363676068) ಹಾಗೂ ಘಟಕ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ-7760992115 ಇರುತ್ತದೆ.
ಆಳಂದ ಘಟಕ : ಕೆ-1 ಸೆಂಟರ್ ಹಟ್ಟಿ ಕಾಂಪ್ಲೆಕ್ಸ್, ಮುನ್ನಾ ಬೇಕರಿ ಎದುರುಗಡೆ, ಹಳೆ ತಹಶೀಲ್ದಾರ್ ಕಚೇರಿ ರಸ್ತೆ, ಆಳಂದ-585302 ಮತ್ತು ಭೀಮಾಶಂಕರ-9071515180 ಹಾಗೂ ಘಟಕ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ 7760992116.
ಜೇವರ್ಗಿ ಘಟಕ : ಕೆ-1 ಸೆಂಟರ್ ಟಿ.ಎಮ್.ಸಿ. ಕಚೇರಿ ಹತ್ತಿರ ಜೇವರ್ಗಿ-585310 ಮತ್ತು ಶಿವಾಜಿ-9019413475 ಹಾಗೂ ಘಟಕ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ 7760992118.
ಅಫಜಲಪೂರ ಘಟಕ : ಕೆ-1 ಸೆಂಟರ್ ತಹಶೀಲ್ದಾರ್ ಕಚೇರಿ ಕಂಪೌಂಡ್ ಅಫಜಲಪೂರ-585301 ಮತ್ತು ಅಮೀರ್-7760606262 ಹಾಗೂ ಘಟಕ ವ್ಯವಸ್ಥಾಕರ ಮೊಬೈಲ್ ಸಂಖ್ಯೆ 7760992121 ಇರುತ್ತದೆ.
ಕಾರಣ ವಿದ್ಯಾರ್ಥಿಗಳು ಸದರಿ ಬಸ್ ಪಾಸಿನ ಪ್ರೀಂಟನ್ನು ಮೇಲ್ಕಂಡ ಈ ಕೌಂಟರ್‍ನಲ್ಲಿ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.






