ಕಲಬುರಗಿ | ಜಿಲ್ಲಾಧಿಕಾರಿಗಳಿಂದ ʼಭಾರತ ಸುಗಮ್ಯ ಯಾತ್ರೆʼಗೆ ಚಾಲನೆ

ಕಲಬುರಗಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಲಬುರಗಿ ವತಿಯಿಂದ ಹಮ್ಮಿಕೊಂಡಿರುವ “ಭಾರತ ಸುಗಮ್ಯ ಯಾತ್ರಾ”-2025 ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚಾಲನೆ ನೀಡಿದರು.
ಈ ಕಾರ್ಯಕ್ರಮವು ಕೇವಲ ಫೋಟೋ ತೆಗೆದುಕೊಳ್ಳುವುದಕ್ಕೆ ಸಿಮಿತವಾಗಿರದೆ, ಎಲ್ಲಾ ತಾಲ್ಲೂಕು ವಿವಿದ್ಯೂದ್ದೇಶ ಪುನರ್ವಸತಿ, ಗ್ರಾಮೀಣ ಪುನರ್ವಸತಿ, ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ತಮ್ಮ ತಾಲೂಕು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಕಟ್ಟಡಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಕಟ್ಟಡಗಳು, ಮನರಂಜನೆ ಸ್ಥಳಗಳು, ಉದ್ಯಾನವನಗಳು, ಗ್ರಂಥಾಲಯಗಳು, ಮಾರುಕಟ್ಟೆ, ಶಾಲೆಗಳಿಗೆ ಭೇಟಿ ನೀಡಿ ಈ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವಂತಹ ಕೆಲಸವನ್ನು ಮಾಡಬೇಕೆಂದು ಅವರು ಹೇಳಿದರು.
ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು ಮೊಬೈಲ್‌ನ ಗೂಗಲ್ ಪ್ಲೇಸ್ಟೋರ್‌ನಲ್ಲಿ YES TO ACCESS ಆ್ಯಪ್ ಡೌನ್‌ಲೋಡ್ ಮಾಡುವ ಮುಖಾಂತರ ವಿಕಲಚೇತನರ ಸ್ನೇಹಿ ಜೀವಿಗಳಿಗೆ ಸುಲಭ ವಾತಾವರಣ ಕಲ್ಪಿಸಲು ಸರಕಾರಿ ಕಟ್ಟಡಗಳಲ್ಲಿ, ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳಲ್ಲಿ Ramp and Railing, Disable Friendly toilet, Wheelchair ನ್ನು ಅಳವಡಿಸುವ ಬಗ್ಗೆ ಜಾಗೃತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾಧಿಕ್ ಹುಸೇನ್ ಖಾನ, ಇಲಾಖಾ ಯೋಜನಾ ಸಹಾಯಕ ಬಿ.ಯಲ್ಲಾಲಿಂಗ್, ಗ್ರಾಮೀಣ ಪುನರ್ ವಸತಿ ಯೋಜನೆ ಜಿಲ್ಲಾ ಸಂಯೋಜಕ ಸಂತೋಷ ಪಟ್ಟೇದಾರ, ಜಿಲ್ಲಾ ಅಂಗವಿಕಲ ಪುನರ್ ವಸತಿ ಕೇಂದ್ರ ನೋಡಲ್ ಅಧಿಕಾರಿ ಪ್ರಕಾಶ ದ್ಯಾಬೇರಿ, ಮಾಹಿತಿ ಸಲಹೆಗಾರರು ಪ್ರಕಾಶ ಜಾಧವ, ಮತ್ತು ಕಛೇರಿಯ ಸಿಬ್ಬಂದಿ ವರ್ಗ ಕಲಬುರಗಿ APD ಸಂಸ್ಥೆ, ವಿಕಲಚೇತನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಿದ್ದರು.







