ಕಲಬುರಗಿ ಜಿಲ್ಲಾಧಿಕಾರಿಗೆ ಅವಹೇಳನ ಪ್ರಕರಣ: ವಿಚಾರಣೆಗೆ ಹಾಜರಾದ ಎನ್.ರವಿಕುಮಾರ್

ಎನ್.ರವಿಕುಮಾರ್
ಕಲಬುರಗಿ: ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಇಂದು(ಜು.17) ವಿಚಾರಣೆಗೆ ಹಾಜರಾದರು.
ಕಲಬುರಗಿ ʼಜಿಲ್ಲಾಧಿಕಾರಿ ಪಾಕಿಸ್ತಾನದಿಂದ ಬಂದಿರಬಹುದು' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಎನ್.ರವಿಕುಮಾರ್ ವಿರುದ್ಧ ಇಲ್ಲಿನ ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನಾ ಮತ್ತು ಅವಹೇಳನ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ಇತ್ತೀಚೆಗಷ್ಟೆ ವಿಚಾರಣೆ ಎದುರಿಸಿದ ಎನ್.ರವಿಕುಮಾರ್ ಅವರು ಇಂದು(ಜು.17) ಎರಡನೇ ಬಾರಿ ಇಲ್ಲಿನ ದಕ್ಷಿಣ ವಿಭಾಗದ ಎಸಿಪಿ ಕಚೇರಿಗೆ ಆಗಮಿಸಿ ತನಿಖಾಧಿಕಾರಿ ಶರಣಬಸಪ್ಪ ಸುಬೇದಾರ್ ಅವರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
Next Story





