ಕಲಬುರಗಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಚುನಾವಣೆ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಕಲಬುರಗಿ: ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ 2026–2031 ಅವಧಿಯ ರಾಜ್ಯ ಮಟ್ಟದ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ರಾಜ್ಯ ಸಂಘದಿಂದ ಚುನಾವಣೆ ಘೋಷಣೆ ಮಾಡಲಾಗಿದ್ದು, ದಿನಾಂಕ 29-05-2026 ಮತ್ತು 30-05-2026 ರಂದು ನಾಮಪತ್ರ ಸಲ್ಲಿಕೆ ನಡೆಯುತ್ತಿದೆ.
ಈ ಹಿನ್ನಲೆಯಲ್ಲಿ ಕಲಬುರಗಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ವತಿಯಿಂದ ವಿವಿಧ ಹುದ್ದೆಗಳಿಗೆ ನಾಮಪತ್ರಗಳನ್ನು ಸಲ್ಲಿಸಲಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ನರಸಪ್ಪ ರಂಗೋಲಿ, ಪ್ರಧಾನ ಕಾರ್ಯದರ್ಶಿಯಾಗಿ ಗುಂಡಯ್ಯ ಸ್ವಾಮಿ, ಕಾರ್ಯಾಧ್ಯಕ್ಷರಾಗಿ ಡಾ. ಭಗವಂತರಾಯ ಭಳುಂಡಗಿ, ಖಜಾಂಚಿಯಾಗಿ ನಾಗರಾಜ ಮೈಲ್ವಾರ, ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಪಾಂಡು ರಾಠೋಡ, ಸಂಚಾಲಕರಾಗಿ ಪೀಡ್ಡಪ್ಪಾ, ಸಹ-ಕಾರ್ಯದರ್ಶಿಯಾಗಿ ಎನ್.ಆರ್. ಕುಲಕರ್ಣಿ ಹಾಗೂ ಕಾರ್ಯದರ್ಶಿಯಾಗಿ ಶರಣಪ್ಪ ಓಂಕಾರ್ ಅವರು ನಾಮಪತ್ರ ಸಲ್ಲಿಸಿದ್ದಾರೆ.
ನಿಕಟ ಪೂರ್ವ ಅಧ್ಯಕ್ಷ ಜೆ. ಮಲ್ಲಪ್ಪ, ಪ್ರಾಂಶುಪಾಲರಾದ ರಾಜು ಗಂಗಾಧರ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಭ್ಯರ್ಥಿ ಶರಣಗೌಡ ಪಾಟೀಲ, ಪ್ರಾಂಶುಪಾಲ ಭೀಮರಾಯ ಅರಕೇರಿ, ಉಮೇಶ್ ಅಷ್ಟಿಗಿ ಹಾಗೂ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಧರ್ಮರಾಜ ಜವಳಿ ಸೇರಿದಂತೆ ಹಲವಾರು ಉಪನ್ಯಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದಲ್ಲದೆ ರಮೇಶ್ ಮಾಡಿಯ್ಯಾಳಕರ, ರವೀಂದ್ರ ಸಜ್ಜಿ, ಭಾರತೀಶ ಭಳುಂಡಗಿ, ಮಲ್ಲಿಕಾರ್ಜುನ ಆನಂದಕರ, ನಾಗರತ್ನ ಇಂಡೆ, ಸುಧಾ, ವರ್ಷಾ, ವಿಜಯಕುಮಾರ ರೋಣದ, ಶಿವಕುಮಾರ್ ಎರಿಗೇರಿ, ಶ್ರೀಮತಿ ಲೀಲಾವತಿ, ಶ್ರೀಮತಿ ಜಗದೇವಿ, ಭಾರತಿ ಪಾಂಡವಿ, ಸವಿತಾ ಸಿ., ಜಗ್ಗಪ್ಪ ಹೊಸಮನಿ, ಡಾ. ವಿಶ್ವನಾಥ್ ಹೊಸಮನಿ, ಶರೀಫ್, ಸೈಯದ್ ಅಕ್ರಮ್ ಸೇರಿದಂತೆ ಅನೇಕ ಉಪನ್ಯಾಸಕರು ಹಾಗೂ ಸದಸ್ಯರು ಭಾಗವಹಿಸಿದ್ದರು.
ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ಹಾಗೂ ಸಂಘಟಿತ ರೀತಿಯಲ್ಲಿ ಮುಂದುವರಿಯುತ್ತಿದೆ ಎಂದು ಸಂಘದ ಮೂಲಗಳು ತಿಳಿಸಿವೆ.






