ಕಲಬುರಗಿ| ನಂದಿಕೂರ ಗ್ರಾಮದಲ್ಲಿ ಪಂಚಲೋಹದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಅನಾವರಣ

ಕಲಬುರಗಿ: ನಗರದ ಹೊರವಲಯದ ನಂದಿಕೂರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರ ಪಂಚಲೋಹದ ಪ್ರತಿಮೆಯನ್ನು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ, ಡಾ. ವಿಠ್ಠಲ ದೊಡ್ಡಮನಿ, ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ಡಾ. ಕಿರಣ್ ದೇಶಮುಖ್, ರಾಜಕುಮಾರ ಕಪನೂರ್, ದಿನೇಶ ದೊಡ್ಡಮನಿ, ಲಕ್ಷ್ಮಣ ಶೃಂಗೇರಿ, ತಹಶೀಲ್ದಾರ್ ಆನಂದಶಿಲ್, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಾಂತ್ ಪೂಜಾರಿ, ಸಿಪಿಐ ಹುಸೇನ ಭಾಷಾ, ಲಿಂಗರಾಜ್ ಕಣ್ಣಿ, ಶಾಮರಾಯ ಜಿ ಪಾಟೀಲ್, ನಾಗೇಂದ್ರ ಶೇರಿಕರ, ಶಾಮರಾಯ ಪಾಟೀಲ್, ಸುರೇಶ್ ಹಾದಿಮನಿ, ಎಸ್.ಎಸ್ ತವಡೆ, ದೇವೇಂದ್ರ ಸಿನ್ನೂರ್, ಪವನಕುಮಾರ್ ವಳಕೇರಿ, ಶ್ರೀನಿವಾಸ ದೊಡ್ಡಮನಿ, ಕುಪೆಂದ್ರ ವರ್ಮಾ, ಸೂರ್ಯಕಾಂತ್ ಕಣ್ಣಿ, ದಸ್ತಾಯ್ಯ ಗುತ್ತೇದಾರ, ಸಂದೀಪ್ ಗುತ್ತೇದಾರ, ಲಕ್ಷ್ಮಣ ಪೂಜಾರಿ, ವಿರೇಶ ಪಡೋಳಕರ್, ರಾಚಯ್ಯ ಸ್ವಾಮಿ ಸೇರಿದಂತೆ ಗ್ರಾಮಸ್ಥರು ಮತ್ತು ಡಾ. ಬಿ ಆರ್ ಅಂಬೇಡ್ಕರ್ ತರುಣ ಸಂಘದ ಮುಖಂಡರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಸಹಕಾರ ನೀಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಾಂತ್ ಪೂಜಾರಿ, ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಶ್ವೇತಾ ದಿನೇಶ ದೊಡ್ಡಮನಿ, ಸದಸ್ಯರುಗಳಾದ ಚಂದ್ರಕಲಾ ಎಸ್. ಕಣ್ಣಿ, ಶಾಂತಾಬಾಯಿ ಪಡೋಳಕರ, ಶ್ರೀಕಾಂತ ಉಳ್ಳಿ ರವರಿಗೆ ವೇದಿಕೆ ಮೇಲೆ ಸನ್ಮಾನಿಸಿ ಗೌರವಿಸಲಾಯಿತು.





