ಕಲಬುರಗಿ | ಜ್ಞಾನ ವಿಜ್ಞಾನ ಸಮಿತಿಯಿಂದ ಡಾ.ಎಂ.ಎಂ.ಕಲಬುರ್ಗಿರವರ ಹುತಾತ್ಮ ದಿನ ಸ್ಮರಣೆ

ಕಲಬುರಗಿ: ಜ್ಞಾನ ವಿಜ್ಞಾನ ಸಮಿತಿಯ ಕಲಬುರಗಿ ಜಿಲ್ಲಾ ಘಟಕ ವತಿಯಿಂದ ಡಾ.ಎಂ.ಎಂ.ಕಲಬುರ್ಗಿರವರ ಹುತಾತ್ಮ ದಿನದ ಸ್ಮರಣೆ ಅಂಗವಾಗಿ ರವಿವಾರ ಇಲ್ಲಿನ ಜಗತ್ ವೃತ್ತದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ಚಿಂತಕ ಶ್ರೀಶೈಲ ಗೂಳಿ ಅವರು, ದಾಬೋಲ್ಕರ್, ಪಾನ್ಸರೆ, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಮುಂತಾದವರು ತಮ್ಮ ಪ್ರಾಣ ಬಲಿದಾನ ಮಾಡಿ ಸಮಾಜಕ್ಕೆ ನವಚಿಂತನೆ ನೀಡಿದ್ದಾರೆ. ಅವರ ಆದರ್ಶ ಮಾರ್ಗದಲ್ಲಿ ನಾವು ನಡೆಯುವುದೇ ನಮ್ಮ ನೈತಿಕತೆ ಎಂದು ಹೇಳಿದರು.
ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷೆ ಸುರೇಖಾ, ಪ್ರೊ.ಆರ್.ಕೆ ಹುಡುಗಿ ಮಾತನಾಡಿದರು.
ಸ್ಮರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆಲ್ಲರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಪ್ರಮಾಣ ವಚನ ಮಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಸಹಭಾಗಿತ್ವ ವಹಿಸಿದ್ದವು.
Next Story





