ಕಲಬುರಗಿ | ಡಾ.ಅಂಬೇಡ್ಕರ್ ಆಧುನಿಕ ಭಾರತದ ನಿಜವಾದ ನಿರ್ಮಾತೃ : ಡಾ.ಶಿವಕುಮಾರ್

ಕಲಬುರಗಿ : ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದೇಶದ ಸಾಂವಿಧಾನಿಕ ಉನ್ನತ ಸಂಸ್ಥೆಗಳಲ್ಲಿ ಶೋಷಿತ ವರ್ಗಗಳಿಗೆ ಪ್ರಾತಿನಿಧ್ಯ ಇಲ್ಲದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಬೆಂಗಳೂರಿನ ಅಕ್ಕಾ ಐಎಎಸ್ ಅಕಾಡೆಮಿ ನಿರ್ದೆಶಕ ಡಾ.ಶಿವಕುಮಾರ ಹೇಳಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯ ಕಾರ್ಯಸೌಧದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟ ಆಯೋಜಿಸಿದ್ದ ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ದೇಶದ ಸುಪ್ರೀಂ ಕೋರ್ಟ್, ಹೈಕೋರ್ಟ್, ಐಐಟಿ, ಸಾರ್ವಜನಿಕ ಸೇವಾ ಆಡಳಿತ ವರ್ಗಗಳಲ್ಲಿ ಈ ದೇಶದ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ, ಶೋಷಿತ ಸಮುದಾಯಗಳಿಗೆ ಸರಿಯಾದ ಪ್ರಾತಿನಿಧ್ಯ ಇಲ್ಲದಿರುವುದು ದೇಶದಲ್ಲಿ ಇನ್ನೂ ಸಾಮಾಜಿಕ ಸಮಾನತೆ ಬಂದಿಲ್ಲ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
ಗೌತಮ ಬುದ್ಧರ ಪಂಚಶೀಲ ತತ್ವಗಳು ಮತ್ತು ಅಷ್ಟಾಂಗ ಮಾರ್ಗಗಳು ಬಸವಣ್ಣನವರ ವಚನಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಿಂದ ಮಾತ್ರ ಭಾರತದಲ್ಲಿ ಸಾಮಾಜಿಕ ಸಮಾನತೆ ತರಲು ಸಾಧ್ಯವಾಗುತ್ತಿದೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಚಿಗರಳ್ಳಿ ಕಬೀರಾನಂದ ಸ್ವಾಮೀಜಿ ಮಾತನಾಡಿ, ನಾವು ಹಿಂದುಳಿಯಲು ನಮ್ಮ ಮನಸ್ಥಿತಿಯೇ ಕಾರಣ. ಮೊದಲು ನಮ್ಮ ಮನಸ್ಥಿತಿ ಬದಲಾಗಬೇಕಿದೆ. ಬಾಬಾಸಾಹೇಬ್ ಅಂಬೇಡ್ಕರ್ ಹಾಗೇ ಸಮುದಾಯದ ವಿದ್ಯಾರ್ಥಿಗಳು ಓದಿ ಸಾಮಾಜದಲ್ಲಿ ಮುಂದೆ ಬರಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗುಲ್ಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಗೂರು ಶ್ರೀರಾಮುಲು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಹಿಂದುಳಿದ ಸಮುದಾಯದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅಪಾರ ಕೊಡುಗೆ ನೀಡಿದ್ದಾರೆ. ಸಂವಿಧಾನ ಮತ್ತು ಅಂಬೇಡ್ಕರ್ ಎರಡು ಒಂದೇ. ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿ ಅಸಾಮಾನ್ಯ ಕಾರ್ಯ ಮಾಡಿದ್ದಾರೆ. ಈ ದೇಶದಲ್ಲಿ ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆ ತೋಡೆದು ಹಾಕಲು ಸಂವಿಧಾನ ಮೂಲಕ ಮಾಡಿದ್ದಾರೆ ಎಂದರು.
ಸರ್ಕಾರಿ ಮಹಾವಿದ್ಯಾಲಯ ಕಲಾನಿಕಾಯದ ಡೀನ್ ಡಾ ವಿಜಯಕುಮಾರ ಸಾಲಿಮನಿ ಮಾತನಾದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ವಸತಿ ನಿಲಯದ ಮುಖ್ಯ ಪರಿಪಾಲಕ ಡಾ.ಸುರೇಶ ಜಂಗೆ ವಹಿಸಿದ್ದರು.
ಅತಿಥಿಗಳಾಗಿ ಕುಲಸಚಿವ ಪ್ರೊ.ರಮೇಶ್ ಲಂಡನ್ಕರ್, ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಜಿ.ಕಣ್ಣೂರ್. ಅರುಣ್ ಕುಮಾರ್ ಕಿನ್ನಿ, ಸೈಯದ್ ಮಜರ್ ಹುಸೇನ್, ರಾಘವೇಂದ್ರ, ಉದಯ ಪಾಟೀಲ್, ಡಿ.ಜಿ.ರಾಜಣ್ಣ, ಡಾ.ಅನಿಲ್ ಟೆಂಗಳಿ, ಶರತ್ ರೇಷ್ಮೆ, ನಾಗಪ್ಪ ನಗನೂರ್, ಲಕ್ಷ್ಮಿಕಾಂತ್, ರಾಜಕುಮಾರ್, ಗಿರೀಶ್ ನಿಲಯ ಪಾಲಕರು, ಶಿವಾನಂದ ಹೊನಗುಂಟಿ, ಡಾ.ಅರುಣ, ಡಾ.ಗೌತಮ್ ಕರಿಕಲ್ ಅಧ್ಯಕ್ಷ ಎನ್.ಎಸ್.ಯು.ಐ. ಸಂಪೂರ್ಣ ಪಾಟೀಲ್ ಉಪಾಧ್ಯಕ್ಷೆ ಎನ್.ಎಸ್.ಯು.ಐ ರವಿಕುಮಾರ್ ಈಶ್ವರ, ಆನಂದ್ ಮೈತ್ರಿ, ಚಂದ್ರಕಾಂತ ಸಂಗೋಳಗಿ, ನಾಗಮ್ಮ ದೊಡ್ಡಮನಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು
ಅಣವೀರಗೌಡ ಬಿರಾದಾರ ನಿರೂಪಿಸಿದರು. ಸಂತೋಷ್ ಕುಮಾರ್ ಎಸ್.ಪಿ. ಸ್ವಾಗತಿಸಿದರು. ಖೇಮ್ಮಣ್ಣ ರಾಠೋಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಚಯ್ಯ ಸ್ವಾಮಿ ಹಿರೇಮಠ ವಂದಿಸಿದರು.







