ಕಲಬುರಗಿ | ಕೇಂದ್ರ ಕಾರಾಗೃಹದ ಬಂಧಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ

ಕಲಬುರಗಿ : ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿನ ಬಂಧಿಗಳಿಗೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ 2025ರ ದಿನಾಚರಣೆ ಪ್ರಯುಕ್ತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಲಬುರಗಿಯವರ ವತಿಯಿಂದ ಬಂದಿಗಳಿಗೆ “Justice for All: Through the Lenc of Legal Aid” ಥೀಮ್ ಅಡಿಯಲ್ಲಿ ಚಿತ್ರಗಳನ್ನು ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸಮಾಜ ಮತ್ತು ಬಂಧಿಗಳಿಗೆ ಕಾನೂನಿನ ಅಡಿಯಲ್ಲಿ ನ್ಯಾಯಯುತವಾಗಿ ಕಟ್ಟಕಡೆಯ ವ್ಯಕ್ತಿಗೂ ಕೂಡ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರವನ್ನು ಎಲ್ಲರಿಗೂ ತಲುಪಿಸುವುದರಲ್ಲಿ ಹೇಗೆ ಅರಿವನ್ನು ಮೂಡಿಸುವುದರ ಜೊತೆಗೆ ನೆರವನ್ನು ನೀಡಲಾಗುತ್ತದೆ ಎಂಬುವುದನ್ನು ಬಿಂಬಿಸುವ ಚಿತ್ರ ಕಲೆಗಳು ಗಮನ ಸೆಳೆದವು.
ಸ್ಥಳದಲ್ಲೇ ಪೇಂಟಿಂಗ್, ವಿಡಿಯೋ, ಸ್ಕೇಚ್‍ಗಳ ಮೂಲಕ ಚಿತ್ರಗಳನ್ನು ಬಂಧಿಗಳು ಬಿಡಿಸಿದರು.
ಚಿತ್ರಗಳನ್ನು ಕಾರಾಗೃಹದ ಅಧೀಕ್ಷಕರಾದ ಡಾ.ಅನಿತಾ ಆರ್., ಸಹಾಯಕ ಅಧೀಕ್ಷಕರಾದ ಚನ್ನಪ್ಪ ಯಟಗಾರ, ನಾಗರಾಜ ಮೂಲಗೆ ಅವರು ಚಿತ್ರಗಳನ್ನು ಪರಿಶೀಲಿಸಿ ಅಂತಿಮವಾಗಿ 3 ಬಂಧಿಗಳಾದ ವಿಜಯ್ ಮೋಹನ್ ಸಿಂಗ್, ಅಮೃತ, ಸತೀಶ್ ರವರು ಬಿಡಿಸಿದ ಚಿತ್ರಗಳನ್ನು ಆಯ್ಕೆ ಮಾಡಿದರು
ಈ ಸಂದರ್ಭದಲ್ಲಿ ಸಂಸ್ಥೆಯ ಜೈಲರ್‍ಗಳಾದ ಸುನಂದ ವಿ.ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್, ಮುಖ್ಯ ವೀಕ್ಷಕರಾದ ಮಹೇಶ್ ಪಾಟೀಲ್ ಮತ್ತು ಬಂಡೆಪ್ಪ ಉಪಸ್ಥಿತರಿದ್ದರು.







