Kalaburagi | ಜಿಮ್ಸ್ ಜಿಲ್ಲಾ ಆಸ್ಪತ್ರೆಯಲ್ಲಿ ಡಾ.ಫ.ಗು.ಹಳಕಟ್ಟಿ ಜಯಂತಿ ಆಚರಣೆ

ಕಲಬುರಗಿ: ನಗರದ ಜಿಮ್ಸ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರ ಕಚೇರಿಯಲ್ಲಿ ಗುರುವಾರ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಫ.ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರಾದ ಡಾ. ರೂಕಿಯ ಆಸ್ನಾ ರಬಾ ಅವರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಓಪಿಡಿ ಸರ್ಜನ್ ಡಾ. ಶಾಲಾನಿ ಸಜ್ಜನಶೆಟ್ಟಿ, ಸ್ಥಳೀಯ ವೈದ್ಯಾಧಿಕಾರಿ ಡಾ. ಜಯಮ್ಮ ಎಸ್. ಗಣಜಲಖೇಡ್, ಕಚೇರಿ ಅಧೀಕ್ಷಕ ವಿಜಯಕುಮಾರ, ಎಚ್‌ಎಫ್‌ಡಬ್ಲ್ಯು ಇಂತಿಜ್, ಜಿಲ್ಲಾ ಟಿಸಿಸಿ ಸೈಕ್ಯಾಟ್ರಿಕ್ ಕೌನ್ಸಿಲರ್ ಮಂಜುನಾಥ ಕಂಬಾಳಿಮಠ, ಸಹಾಯಕರು ಕಾವ್ಯ, ಅಕೌಂಟೆಂಟ್ ಸಿದ್ದಪ್ಪ, ಗಣಕಯಂತ್ರ ಸಹಾಯಕರು ಪಾರ್ವತಿ ಭೀಮರಾವ್, ಸುರೇಖಾ ದಿವಟಗಿ, ಅವಿನಾಶ್ ಪಾಟೀಲ, ಕೈಲಾಶ್ ಶರಣು, ಪೃಥ್ವಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.
Next Story




