ಕಲಬುರಗಿ | ಸುಗಮ ಸಂಗೀತ ಕಾರ್ಯಕ್ರಮಕ್ಕೆ ಡಾ.ಸುರೇಶ ಎಲ್. ಶರ್ಮಾ ಚಾಲನೆ

ಕಲಬುರಗಿ : ನಗರದ ಪತ್ರಿಕಾ ಭವನದಲ್ಲಿ ಗುಲ್ಬರ್ಗಾ ಡ್ಯಾನ್ಸ್ ಸಂಘದಿಂದ ಸಾಂಸ್ಕೃತಿಕ ನೃತ್ಯ ಮತ್ತು ಸುಗಮ ಸಂಗೀತ ಕಾರ್ಯಕ್ರಮವನ್ನು ಲೊಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರರಾದ ಡಾ.ಸುರೇಶ ಎಲ್. ಶರ್ಮಾ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರಮೇಶ ಸ್ವಾಮಿ ಬೀದರಕರ, ಸಂಘದ ಅಧ್ಯಕ್ಷ ಯಂಕಪ್ಪ (ಅಕ್ಷಯ), ಜ್ಯೋತಿ ಅಕ್ಷಯ, ಪ್ರೀಯಾ ಗಡ್ಡಾಳೆ, ಕಾಂಗ್ರೆಸ್ ಮುಖಂಡ ವಿಜಯಕುಮಾರ ಕಟ್ಟಿಮನಿ, ನ್ಯಾಯವಾದಿ, ಹೋರಾಟಗಾರರಾದ ರವಿಚಂದ್ರ ಗುತ್ತೇದಾರ, ಪಿಎಸ್‍ಐ ಯಶೋಧಾ ಕಟಕೆ, ವೈದ್ಯ ನಿಜಲಿಂಗಪ್ಪ ಕೊರಳ್ಳಿ, ನ್ಯಾಯವಾದಿ ಜಯನಂದ ಸ್ವಾಮಿ, ಅಂಬಾರಾಯ ಪರಸ್ತಿ, ಭಗವಾನ ಭೋವಿ, ಅಶ್ವಿನಿ, ಹಿರಿಯ ಸಾಹಿತಿ ಎಸ್. ಎಸ್. ಸುಗಂಧಿ, ರಕ್ಷಣಾ ಇಲಾಖೆಯ ನಿವೃತ್ತ ಅಧಿಕಾರಿ ಮಲ್ಲಿಕಾರ್ಜುನ್ ಎಂ. ಸಿಂಗೆ, ಚಲನಚಿತ್ರ ನಿರ್ಮಾಪಕ ಅಂಬರೀಶ ಪಾಟೀಲ್, ಖ್ಯಾತ ಕಲಾವಿದ ಶರಣು ಕಾಂಬಳೆ, ಕಿರುಚಿತ್ರ ನಟ ಹಿರಗೇಶ ಹಯ್ಯಾಳಕರ್ ಸೇರಿದಂತೆ ಇತರರು ಇದ್ದರು.
ಈ ವೇಳೆ ಜ್ಯೋತಿ ನೃತ್ಯ ಕಲಾತಂಡದವರು ಹಾಗೂ ಪ್ರೀಯಾ ನೃತ್ಯ ಕಲಾತಂಡದವರು ಭರತ್ ನಾಟ್ಯ ಮಾಡಿ ಜನರ ಗಮನ ಸೆಳೆದರು.





