ಕಲಬುರಗಿ | ಚಿಂಚೋಳಿ ತಾಲೂಕಿನಲ್ಲಿ ಭೂಕಂಪನದ ಅನುಭವ

ಕಲಬುರಗಿ: ಚಿಂಚೋಳಿ ತಾಲೂಕಿನ ಕೆಲವೆಡೆ ಶುಕ್ರವಾರ ಭೂಕಂಪನ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಚಿಂಚೋಳಿ ತಾಲೂಕಿನ ಐನಾಪುರ, ಗಡಿನಿಂಗದಹಳ್ಳಿ, ಸೊಂತ, ಪಟವಾದ ಗ್ರಾಮದಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಶುಕ್ರವಾರ ನಸುಕಿನ ಜಾವ, ಮಧ್ಯಾಹ್ನ, ಸಂಜೆ ಭೂಮಿ ಕಂಪಿಸಿದೆ. ಪದೇ ಪದೇ ಭೂಕಂಪ ಆಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಅಲ್ಲದೆ, ವಿಜಯಪುರ ಜಿಲ್ಲೆಯಲ್ಲೂ ಕೆಲವೆಡೆ ಭೂಕಂಪನದ ಅನುಭವವಾಗಿದೆ ಎಂದು ತಿಳಿದುಬಂದಿದೆ.
Next Story





