ಕಲಬುರಗಿ | ಚನ್ನಮಲ್ಲೇಶ್ವರ ಪತ್ತಿನ ಸಹಕಾರ ಸಂಘದ ಚುನಾವಣೆ
ಅಧ್ಯಕ್ಷರಾಗಿ ಪರಮೇಶ್ವರ ಮುನ್ನಳ್ಳಿ, ಉಪಾಧ್ಯಕ್ಷರಾಗಿ ಸಂತೋಷ ಡೋಣಿ ಅವಿರೋಧ ಆಯ್ಕೆ

ಕಲಬುರಗಿ: ಶ್ರೀ ಚನ್ನಮಲ್ಲೇಶ್ವರ ಪತ್ತಿನ ಸಹಕಾರ ಸಂಘದ 2025 ರಿಂದ ಮುಂದಿನ 5 ವರ್ಷಗಳ ಅವಧಿಗಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪರಮೇಶ್ವರ ಮುನ್ನಳ್ಳಿ, ಉಪಾಧ್ಯಕ್ಷರಾಗಿ ಸಂತೋಷ ಡೋಣಿ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಸವರಾಜ ಪುಲಾರಿ ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ನಿರ್ದೇಶಕರಾದ ಸಿದ್ರಾಮಪ್ಪ ಹಣಮಂತಪ್ಪ ಹೊದಲೂರ, ಚನ್ನವೀರಪ್ಪ ಪಾಟೀಲ (ದಣ್ಣೂರ), ಪ್ರಭುಲಿಂಗ ಗೊಬ್ಬುರ, ಗುರುಲಿಂಗಪ್ಪ ಹಾದಿಮನಿ, ಶಿವಶರಣಪ್ಪಾ ಬಸವರಾಜ ಮಲಕೂಡ, ಲಲಿತಾಬಾಯಿ ಸುಭಾಷಚಂದ್ರ ಅಲ್ಲದ, ಶಕುಂತಲಾ ಸೋಸಟ್ಟಿ, ವೀರೆಶ ಶೀಲವಂತ, ಶರಣಪ್ಪ ದೇಗಾಂವ, ಶಿವಶಂಕರ ಜಾಧವ, ಹಣಮಂತ ಏಕಮೈಕರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಂದ್ರ ಚಿನ್ನಮಳ್ಳಿ ಇದ್ದರು.
Next Story





