ಕಲಬುರಗಿ | ಅದಾನಿ ಒಡೆತನದ ಎಸಿಸಿ ಕಾರ್ಖಾನೆಯ ಕಾರ್ಮಿಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ರಾತ್ರಿ ಮೂರು ಗಂಟೆಯವರೆಗೆ ಮತ ಎಣಿಕೆ ಕಾರ್ಯ

ಕಲಬುರಗಿ : ನಾಲ್ಕು ವರ್ಷಗಳಿಂದ ನೆನಗೂದಿಗೆ ಬಿದ್ದಿರುವ ಅದಾನಿ ಒಡೆತನದ ಎಸಿಸಿ ಸಿಮೆಂಟ್ ಕಂಪನಿಯ ಕಾರ್ಮಿಕ ಸಂಘಕ್ಕೆ ಶನಿವಾರ ಚುನಾವಣೆ ನಡೆದಿದ್ದು, ರಾತ್ರಿ ಮೂರು ಗಂಟೆಗಳವರೆಗೆ ಮತ ಎಣಿಕೆ ಕಾರ್ಯ ಜರುಗಿತು ಎಂದು ತಿಳಿದುಬಂದಿದೆ.
ನೂತನ ಪದಧಿಕಾರಿಗಳ ಆಯ್ಕೆ :
ಶರಣಬಸ್ಸು ಸಿರೂರಕರ 156 ಮತಗಳು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ವಿಜಯ ನಾಯ್ಕ 130, ಭಾಗಣ್ಣ ದೊರಿ 101, ಮೊಹಮ್ಮದ್ ಇಲಿಯಾಸ್ 98, ಸಂತೋಷ ಪವಾರ 46, ಹೆಚ್.ಎಸ್.ಪಟ್ಕಿ 4 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಅನೀಲ ಸಿಬೋ 356, ದೀಪಕ ಪೂಜಾರಿ 325, ಅವಿನಾಶ ರಾಠೋಡ 290 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಬಸವರಾಜ ಕರ್ಲಿ, ಕಾಶಿನಾಥ, ನಾಸೀರ ಹುಸೇನ್, ರವಿ ಪವಾರ ಸೋತಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ವಿಶಾಲ ನಂದೂರಕರ 274 ಮತಗಳನ್ನು ಪಡೆದು ಗೆದ್ದರೆ, 270 ಮತಗಳನ್ನು ಪಡೆದು ಸ್ಯಾಮ್ಸನ್.ಐ.ರೆಡ್ಡಿ ಕೂದಲೆಳೆ ಅಂತರದಲ್ಲಿ ಸೋಲುಂಡರು. ಸಹ ಕಾರ್ಯದರ್ಶಿ ಸತೀಶ 283, ಅಹೆಸಾನ್ ಅಲಿ 254, ಸಂಜಯ ತೇಜು 243 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದು, ವಿಜಯ ಸಿಂಗೆ, ಸಂತೋಷ ಜೋಗೂರ, ಬಸವರಾಜ ನಾಟೀಕರ, ಪ್ರಕಾಶ ಚವ್ಹಾಣ ಸೋಲು ಅನುಭವಿಸಿದ್ದಾರೆ.
ಖಜಾಂಚಿಯಾಗಿ ಉಮೇಶ ಪವಾರ 254 ಗೆಲುವು ಸಾಧಿಸಿದ್ದು, ಮರೆಪ್ಪ ಕೊಲ್ಲೂರ 134, ಸಂದೀಪ ಜೋಗೂರ 35, ಯುವರಾಜ 99, ಬಸವರಾಜ ತುಪ್ಪದ 18 ಮತ ಪಡೆದು ಪರಾಭವಗೊಂಡಿದ್ದಾರೆ.
ಅವಧಿ ಮುಗಿದರೂ ಚುನಾವಣೆ ನಡೆಸದೇ ಸ್ವಯಂ ಘೋಷಿತ ಪದಾಧಿಕಾರಿಗಳಾಗಿ ನಾಮನಿರ್ದೇಶನ ಮಾಡಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಎಐಟಿಯುಸಿ ಕಾರ್ಮಿಕ ಸಂಘದ ಮಾಜಿ ಪ್ರಧಾನ ಕಾರ್ಯರ್ಶಿ ಸ್ಯಾಮಸನ್ ಐ.ರೆಡ್ಡಿ ನ್ಯಾಯಾಲಯದಲ್ಲಿ ಮೊರೆ ಹೋಗಿದ್ದರು. ಚಿತ್ತಾಪುರ ತಾಲ್ಲೂಕು ಜೆ.ಎಂ.ಎಫ್.ಸಿ ಚುನಾವಣೆ ನಡೆಸುವಂತೆ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಶನಿವಾರ ಸಂಘದ ಚುನಾವಣೆಗೆ ಮತದಾನ ನಡೆಯಿತು.
ಒಟ್ಟು 612 ಜನ ಮತದಾರರು:
ಎಸಿಸಿ ಅದಾನಿ ಸಿಮೆಂಟ್ ಕಾರ್ಖಾನೆಯ 256 ಖಾಯಂ ಕಾರ್ಮಿಕರಲ್ಲಿ 218 ಜನ, ತಾಜ್ ಗ್ರುಪ್ನ 334 ಜನ ಕಾರ್ಮಿರು ಇತರೆ ಇತರೆ26 ಸೇರು 552 ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.







